Skip to main content


ಒಳ್ಳೆ ಚಿತ್ರಕತೆ ಕೊಡೋ ನಿರ್ದೇಶಕರಿಗೆ ನಿಖಿಲ್‌ ಕುಮಾರ್‌ 5 ಕೋಟಿ ಆಫರ್‌.?

ಜಾಗ್ವಾರ್​ ಸಿನಿಮಾ ಮೂಲಕ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಹೀರೋ ನಿಖಿಲ್ ಕುಮಾರ್. ಮೊದಲ ಪ್ರಯತ್ನದಲ್ಲೇ ಭೇಷ್ ಅನ್ನಿಸಿಕೊಂಡು, ಭರವಸೆಯ ಹೀರೋ ಆಗಿ ಹೊರ ಹೊಮ್ಮಿದ್ರು. ಜಾಗ್ವಾರ್ ನಂತ್ರ, ನಿಖಿಲ್ ಕುಮಾರ್ ಹೀರೋ ಆಗಿ ನಟಿಸ್ತಿರೋ ಎರಡನೇ ಸಿನಿಮಾ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಫ್ಯಾಮಿಲಿ ಆಕ್ಷನ್ ಎಂಟ್ರಟ್ರೈನರ್ ಶೂಟಿಂಗ್ ಭರದಿಂದ ಸಾಗಿದೆ. ಇತ್ತೀಚೆಗೆ ರಾಮನಗರದಲ್ಲಿ ರಿಲೀಸ್ ಆದ ಸೀತಾರಾಮ ಕಲ್ಯಾಣ ಟೀಸರ್ ಯೂಟ್ಯೂಬ್​ನಲ್ಲಿ ದಾಖಲೆ ಬರೆದಿದೆ. ಜಾಗ್ವಾರ್, ಸೀತಾರಾಮ ಕಲ್ಯಾಣ ನಂತ್ರ ಮತ್ತೊಂದು ಚಿತ್ರಕ್ಕೆ ನಿಖಿಲ್ ಪ್ಲಾನ್ ಮಾಡ್ತಿದ್ದಾರೆ. ಆ ಚಿತ್ರಕ್ಕೆ ಉತ್ತಮ ಕಥೆ ಕೊಡೋ ನಿರ್ದೇಶಕರಿಗೆ, ನಿಖಿಲ್ ಕುಮಾರ್, 5 ಕೋಟಿ ಕೊಡೋದಾಗಿ ಆಫರ್ ಮಾಡಿದ್ದಾರೆ ಅಂತ ಟಾಲಿವುಡ್​ನಲ್ಲಿ ಗುಲ್ಲಾಗಿದೆ. ತೆಲುಗು ನಿರ್ದೇಶಕರು ಕೂಡ ನಿಖಿಲ್​ಗೆ ಕತೆ ಹೇಳಿ ಒಪ್ಪಿಸಿ, ಕೋಟಿ ಕೋಟಿ ಎಣಿಸ್ಬೋದು ಅಂತೆಲ್ಲಾ ಪುಂಖಾನುಪುಂಖವಾಗಿ ತೆಲುಗು ವೆಬ್​ಸೈಟ್​ಗಳಲ್ಲಿ ವರದಿಯಾಗಿದೆ.   

short by Pawan / more at Tv5kannada

Comments