Skip to main content


ಬಿಗ್ ಬಾಸ್ ಕನ್ನಡ-6: ಸಂಭಾವ್ಯ ಪಟ್ಟಿ ವೈರಲ್

'ಬಿಗ್ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೋಮೋ ಪ್ರಸಾರ ಆಗುತ್ತಿದೆ. ಅಷ್ಟೇ ಅಲ್ಲ, 'ಬಿಗ್ಬಾಸ್' ಮನೆ ಸೇರಬೇಕು ಎಂಬ ಆಸೆ ಹೊತ್ತ ಜನಸಾಮಾನ್ಯರ ಆಯ್ಕೆ ಪ್ರಕ್ರಿಯೆಗೂ ಕಿಕ್ ಸ್ಟಾರ್ಟ್ ಕೊಡಲಾಗಿದೆ. ಇದೀಗ ಸಂಭಾವ್ಯರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುರಿ ಪ್ರತಾಪ್, ಶುಭ ಪೂಂಜಾ, ಶ್ರುತಿ ಇಲ್ಲದೆ ಕನ್ನಡ ಹಾಡುಗಳನ್ನ ಹೇಗಂದ್ರೆ ಹಾಗೆ ಹಾಡಿ ಫೇಮಸ್ ಆಗಿದ್ದ ತುಳಸಿ ಪ್ರಸಾದ್, 'ಟಕಿಲ' ಹಾಡಲ್ಲಿ ಕುಣಿದ ಚೆಲುವೆ ಶಾಲಿನಿ ಗೌಡ, ಟೆನ್ನಿಸ್ ಕೃಷ್ಣ, ಸುಮನ್ ರಂಗನಾಥ್, 5ರೂ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಮಂಡ್ಯದ ಶಂಕರೇ ಗೌಡಗಡ್ಡಪ್ಪ,ವಿಜಯಲಕ್ಷ್ಮಿ,ಒಗ್ಗರಣೆ ಡಬ್ಬಿ ಮುರಳಿ,ನಟಿ ಪ್ರೇಮ ಹೆಸರು ಕೇಳಿಬಂದಿದೆ.  

short by Pawan!

Comments