Skip to main content


ಸೆಪ್ಟೆಂಬರ್‌ನಿಂದ ಬಿಗ್ ಬಾಸ್ ಕನ್ನಡ 6 ಆರಂಭ?

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚರ್ಚೆ, ವಾದ ವಿದಾದಕ್ಕೆ ಕಾರಣವಾಗುವ ಶೋ ಎಂದರೆ ಅದು ಬಿಗ್ ಬಾಸ್ ಮಾತ್ರ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಜಗಳ, ಮನಸ್ತಾಪ, ಆನಂದ, ಕಣ್ಣೀರು ಎಲ್ಲವೂ ಚರ್ಚೆಗೆ ಒಳಗಾಗುತ್ತವೆ. ಇದೀಗ ಹೊಸ ಸೀಸನ್‌ನೊಂದಿಗೆ ಬಿಗ್ ಬಾಸ್ ಮತ್ತೆ ಕಿರುತೆರೆ ವೀಕ್ಷಕರ ಮುಂದೆ ಬರುತ್ತಿದೆ. ಈ ಬಾರಿಯೂ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು ಆಡಿಷನ್ ಪ್ರಕ್ರಿಯೆ ಆರಂಭವಾಗಿದೆ. ಬಿಗ್ ಬಾಸ್‌ನಲ್ಲಿ ಭಾಗಿಯಾಗಲು ಇಚ್ಛಿಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಶೋ ಸೆಪ್ಟೆಂಬರ್‌‍ನಿಂದ ಆರಂಭವಾಗುವ ನಿರೀಕ್ಷೆ ಇದೆ.   

short by Pawan / more at Vijayakarnataka

Comments