Skip to main content


ಹೆಣ್ಣು ವೇಷ ತೊಟ್ಟಿರುವ ಕನ್ನಡದ ಈ ನಟ ಯಾರು?

ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, 'ರಾಮ ರಾಮ ರೇ' ಖ್ಯಾತಿಯ ನಟರಾಜ್ ಚಾಲೆಂಜಿಂಗ್ ಪಾತ್ರಗಳನ್ನು ಮಾಡುತ್ತಾರೆ. ಈ ಹಿಂದೆಯಿಂದಲೂ ಅಂತಹ ಪಾತ್ರಗಳನ್ನು ಮಾಡಿಕೊಂಡು ಬಂದ ಅವರು ತಾವು ನಟಿಸಿದ್ದ ಒಂದು ಪಾತ್ರದ ಫೋಟೋವನ್ನು ನಿನ್ನೆ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋ ನೋಡಿದರೆ ಇದು ನಟರಾಜ್ ಅವರೇನಾ ಎಂದು ಆಶ್ಚರ್ಯ ಆಗುತ್ತದೆ. ಅಂದಹಾಗೆ, ನಟರಾಜ್ ನಾಲ್ಕು ವರ್ಷಗಳ ಹಿಂದೆ ಕಲಾಗಂಗೋತ್ರಿ ಮಂಜು ಅವರ ನಿರ್ದೇಶನದಲ್ಲಿ ಬಂದ 'ಇದೇ ಪ್ರೀತಿ ಪ್ರೇಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯನ್ನು ಬಿ.ಸುರೇಶ್ ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯಲ್ಲಿ ಮರೀಚಿಕೆ ಎಂಬ ಪಾತ್ರವನ್ನು ನಟರಾಜ್ ನಿರ್ವಹಿಸುತ್ತಿದ್ದು, ಆ ಫೋಟೋವನ್ನು ಈಗ ಹಂಚಿಕೊಂಡಿದ್ದಾರೆ.    

short by Pawan / more at Filmibeat

Comments