Skip to main content


ಅಂಗವಿಕಲ ಅಭಿಮಾನಿಗೆ ಊಟ ಬಡಿಸಿದ ದರ್ಶನ್

ನಟ ದರ್ಶನ್ ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೊ ಎಂದು ಆಗಾಗ ಸಾಬೀತು ಮಾಡುತ್ತಿರುತ್ತಾರೆ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಈಗ ಮತ್ತೆ ಸಿಕ್ಕಿದೆ. ಕಳೆದ ಶುಕ್ರವಾರ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವವಿತ್ತು. ಅದರ ಸಲುವಾಗಿ ದರ್ಶನ್ ಅವರ ಫಾರಂ ಹೌಸ್​ನಲ್ಲಿ ವಿಶೇಷ ಪೂಜೆ ನಡೆಯಿತು. ಆಗ ಅಲ್ಲಿಗೆ ಅಚಾನಕ್ ಆಗಿ ಬಂದ ವಿಶೇಷ ಚೇತನನಿಗೆ ಸ್ವಾಗತ ನೀಡಿದ ದರ್ಶನ್​, ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಮಾತ್ರವಲ್ಲದೆ, ಊಟವನ್ನೂ ಬಡಿಸಿದ್ದಾರೆ. ಇದನ್ನು ಅಭಿಮಾನಿಗಳು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.    

short by Pawan / more at Filmibeat

Comments