Skip to main content


ಕುರುಕ್ಷೇತ್ರ ಸಿನಿಮಾವೇ ಮೊದ್ಲು ಬಿಡುಗಡೆಯಾಗಲಿ: ನಿಖಿಲ್

ಸಿನಿಮಾ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ನಿಖಿಲ್ ಕಾರಣ ಎಂಬ ಸುದ್ದಿ ಕೇಳಿ ಬಂದಿತ್ತು. 'ಕುರುಕ್ಷೇತ್ರ' ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ನಿಖಿಲ್ ಒಬ್ಬರು ಡಬ್ಬಿಂಗ್ ಮಾಡಿದರೆ, ಚಿತ್ರದ ಎಲ್ಲಾ ಕೆಲಸ ಸಂಪೂರ್ಣವಾದಂತೆ. ಆದರೆ, 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್​​​ನಲ್ಲಿ ತೊಡಗಿಸಿಕೊಂಡಿರುವ ನಿಖಿಲ್, ಆ ಚಿತ್ರ ಬಿಡುಗಡೆಯಾದ ನಂತರ`'ಕುರುಕ್ಷೇತ್ರ' ಬಿಡುಗಡೆಯಾಗಲಿ ಎಂದು ಡಬ್ಬಿಂಗ್ ಮಾಡದೆ ಮುಂದೂಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.
ಈ ಕುರಿತು ಮಾತನಾಡಿದ ನಿಖಿಲ್, 'ಕುರುಕ್ಷೇತ್ರ' ಬಿಡುಗಡೆಯಾದ ನಂತರ 'ಸೀತಾರಾಮ ಕಲ್ಯಾಣ' ಬಿಡುಗಡೆಯಾಗಲಿ. ಆ ಚಿತ್ರಕ್ಕೆ ನನ್ನ ಡಬ್ಬಿಂಗ್ ಬಾಕಿ ಇದೆ ನಿಜ. ಆದರೆ ಎರಡು ದಿನಗಳ ಕೆಲಸ ಅಷ್ಟೇ. ಅವರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್ ಮಾಡಿ ಬರುತ್ತೇನೆ' ಎಂದಿದ್ದಾರೆ. ಇನ್ನು ನಿಖಿಲ್​​​​ ಪಾತ್ರ ದೊಡ್ಡದಾಗಿರುವ ಬಗ್ಗೆ ದರ್ಶನ್ ಕೋಪಗೊಂಡಿದ್ದಾರೆ ಎಂಬ ಗಾಸಿಪ್​ ಕುರಿತು ಪ್ರತಿಕ್ರಿಯಿಸಿರುವ ಅವರು 'ಅಭಿಮನ್ಯು ಪಾತ್ರ ಕಾಲ್ಪನಿಕವಲ್ಲ. ಅದೊಂದು ಐತಿಹಾಸಿಕ ಪಾತ್ರ. ಚಿತ್ರದಲ್ಲಿ ಆ ಪಾತ್ರ ಎಷ್ಟಿರಬೇಕೋ ಅಷ್ಟು ಇದೆ' ಎಂದಿದ್ದಾರೆ.     


short by Pawan!

Comments