Skip to main content


ಕತೆಗಾಗಿ ರೂಲ್ಸ್ ಬ್ರೇಕ್ ಮಾಡಿದ ಶಿವಣ್ಣ

ನಾನೇ ರೂಲ್ಸ್ ಬ್ರೇಕ್ ಮಾಡಿದೆ ನಿಮಗೆ ಗೊತ್ತಿರುವಂತೆ ನಾನು ರೀಮೇಕ್ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದೆ. ಯಾವಾಗ ನಾನು ಮೋಹನ್ ಲಾಲ್ ನಟನೆಯ 'ಒಪ್ಪಂ' ಚಿತ್ರ ನೋಡಿದನೋ ಕತೆ ನನ್ನ ಕಾಡಿತು. ಅದೇ ಸಂದರ್ಭದಲ್ಲಿ ಈ ಕತೆಯನ್ನು ಕನ್ನಡದಲ್ಲಿ ಮಾಡಬೇಕೆಂದು ನಿರ್ದೇಶಕ ಜಿ ವಿ ಆರ್ ವಾಸು ಮತ್ತವರ ತಂಡ ನನ್ನ ಬಳಿ ಬಂತು. ರೀಮೇಕ್ ಎನ್ನುವುದನ್ನು ಬದಿಗಿಟ್ಟರೆ ಕನ್ನಡಿಗರಿಗೆ ನನ್ನ ಮೂಲಕ ಒಳ್ಳೆಯ ಸಿನಿಮಾ ಸಿಗುತ್ತದೆ ಎಂದ ಮೇಲೆ ನನ್ನ ರೂಲ್ಸ್ ಅನ್ನು ನಾನೇ ಬ್ರೇಕ್ ಮಾಡುವುದರಲ್ಲಿ ತಪ್ಪಿಲ್ಲ ಅನಿಸುತು. ಮುಂದೆಯೂ ಹೀಗೆ ರಾಜಿಯಾಗುವೆ ನಾನು ಹಾಕಿಕೊಂಡ ರೀಮೇಕ್ ವಿರುದ್ಧದ ಈ ಗಡಿರೇಖೆ ಮುರಿದಿದ್ದು ಕೇವಲ 'ಕವಚ' ಚಿತ್ರಕ್ಕೆ ಮಾತ್ರವಲ್ಲ. ಮುಂದೆಯೂ ಈ ರೂಲ್ಸ್ ಬ್ರೇಕ್ ಜಾರಿಯಲ್ಲಿರುತ್ತದೆ. ಯಾವುದೇ ಭಾಷೆಯ ಚಿತ್ರವಾಗಿರಬಹುದು. ಅದರಲ್ಲಿ ನಾನು ನಟಿಸುತ್ತೇನೆ. ಆದರೆ, ಷರತ್ತುಗಳು ಅನ್ವಯಿಸುತ್ತವೆ. ಕತೆ ತುಂಬಾ ಭಿನ್ನವಾಗಿರಬೇಕು. ದೊಡ್ಡ ಸ್ಟಾರ್ ನಟ ಕಾಣಿಸಿಕೊಳ್ಳಬೇಕು ಎನ್ನುವುದಕ್ಕೆ ಮಾತ್ರ ಯಾವುದ್ಯಾವುದೋ ಕತೆ ತಂದರೆ ನಾನು
ಮಾಡಲ್ಲ ಎಂದು ಹೇಳಿದ್ದಾರೆ.    

short by Pawan / more at Suvarna News

Comments