Skip to main content


ಸಿಗದ ಅವಕಾಶ, ಕೈಯಲ್ಲಿ ಕಾಸಿಲ್ಲದ ಆ ದಿನಗಳ ಮೆಲುಕು ಹಾಕಿದ ಡಾಲಿ

ಧನಂಜಯ್​ ಡೈರೆಕ್ಟರ್​ ಸ್ಪೆಷೆಲ್​ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ರು. ಈ ಮುಂಚೆ ಅವರು ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ರು. ಚಿತ್ರರಂಗಕ್ಕೆ ಬರಬೇಕು ಎನ್ನುವ ಅವರ ಬಯಕೆ ಬೇಗನೆ ಈಡೇರಿರಲಿಲ್ಲ. ಅವಕಾಶ ಅರಸಿ ಬೆಂಗಳೂರಿಗೆ ಬಂದಿದ್ದ ಅವರಿಗೆ ಸಾಕಷ್ಟು ಕಷ್ಟಗಳು ಎದುರಾಗಿದ್ದವಂತೆ. ತಾವು ಅನುಭವಿಸಿದ ನೋವು, ದುಡ್ಡಿಲ್ಲದೆ ಅಲೆದ ದಿನಗಳನ್ನು ಡಾಲಿ ಸದ್ಯ ಮೆಲುಕು ಹಾಕಿದ್ದಾರೆ. ಖಾಸಗಿ ವಾಹಿನಿಯಲ್ಲಿಯ ಶೋವೊಂದರಲ್ಲಿ ಹಾಜರಾಗಿದ್ದ ಅವರು, ತಮ್ಮ ಕರುಣಾಜನಕ ಕಥೆ ಹಂಚಿಕೊಂಡಿದ್ದಾರೆ. ಜಯನಗರದಲ್ಲಿ ವಾಸವಾಗಿದ್ದ ಧನಂಜಯ್​ಗೆ ಯಾವುದೇ ಅವಕಾಶ ಸಿಕ್ಕಿರಲಿಲ್ವಂತೆ. ಈ ವೇಳೆ ಅವರು ಪ್ರತಿ ದಿನ ಜಾಹೀರಾತುಗಳು ಪಾಂಪ್ಲೆಟ್ಸ್​​​ ಹಂಚಲು ಹೋಗುತ್ತಿದ್ದರಂತೆ. ಇದಕ್ಕೆ ಅವರು ಪಡೆಯುತ್ತಿದ್ದ ಸಂಬಳ 100 ರೂ. ಅಂತೆ. ಒಂದು ದಿನ ಕೈಯಲ್ಲಿ ಬಿಡಿಗಾಸು ಇರಲಿಲ್ವಂತೆ. ಈ ವೇಳೆ ಚಿತ್ರವೊಂದಕ್ಕೆ ವಾಯ್ಸ್​​ ಡಬ್​ಗೆ ಅವಕಾಶ ಬಂತಂತೆ. ಕೇವಲ ಎರಡು ಡೈಲಾಗ್ ಹೇಳಿದ್ದಕ್ಕೆ 1200 ರೂ. ಸಂಭಾವನೆ ನೀಡಿದ್ದರಂತೆ.   

short by Pawan!

Comments