Skip to main content


ಮತ್ತೆ ಬಣ್ಣ ಹಚ್ಚಲಿರುವ ನಿವೇದಿತಾ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಅವರ ಕಿರಿಯ ಮಗಳು ನಿವೇದಿತಾ , ಈ ಹಿಂದೆ 'ಅಂಡಮಾನ್' ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ಈಗ ಮತ್ತೆ ಬಣ್ಣದ ಲೋಕಕ್ಕೆ ಮರು ಪ್ರವೇಶ ಪಡೆಯುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ತಮ್ಮ 'ಶ್ರೀ ಮುತ್ತು' ಬ್ಯಾನರ್ ನ ಅಡಿಯಲ್ಲಿ 'ಹೇಟ್ ಯೂ ರೋಮಿಯೋ' ಎಂಬ ವೆಬ್ ಸರಣಿಯನ್ನು ಶುರು ಮಾಡಿದ್ದರು. ಈ ಸಂಸ್ಥೆಯ ಜವಾಬ್ದಾರಿಯನ್ನು ಅವರ ಮಗಳು ನಿವೇದಿತಾ ವಹಿಸಿಕೊಂಡಿದ್ದರು. ಇನ್ನು ಈ ವೆಬ್ ಸರಣಿಯಲ್ಲಿ 'ಕಿರಿಕ್ ಪಾರ್ಟಿ'ಯ ಅರವಿಂದ್ ಅಯ್ಯರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಿವೇದಿತಾರವರು ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ 'ಲೂಸ್ ಕನೆಕ್ಷನ್' ಎಂಬ ವೆಬ್ ಸರಣಿ ನಿರ್ದೇಶನ ಮಾಡಿದ್ದ ಇಶಾಮ್ ಖಾನ್ ಇದಕ್ಕೂ ನಿರ್ದೇಶಕರಾಗಿದ್ದಾರೆ.    

short by Pawan / more at Balkani News

Comments