Skip to main content


ಸುದೀಪ್ ಪ್ರೇರಣೆಯೇ ಈ ಚಿತ್ರಕ್ಕೆ ಕಾರಣ

'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಚಿಕ್ಕ ವಯಸ್ಸಿಗೆ ಸಿನಿಮಾ ರಂಗದ ಸ್ಟಾರ್ ನಟರಿಗೆ ಆಯಕ್ಷನ್ ಕಟ್ ಹೇಳಿದ ಹೆಗ್ಗಳಿಕೆ ಇವರದು. ತಮ್ಮ ಚಿತ್ರರಂಗದ ಅನುಭವಗಳನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದು ಹೀಗೆ. ಮೊದಲ ಬಾರಿಗೆ ಸುದೀಪ್ ಅವರಿಗೆ ನನ್ನನ್ನು ಪರಿಚಯಿಸಿಕೊಟ್ಟಿದ್ದು ಮೇಕಪ್‌ಮೆನ್‌ಗುರುಮೂರ್ತಿ. ಆ ವೇಳೆಗಾಗಲೇ ಮೂರ್ನಾಲ್ಕು ನಿರ್ದೇಶಕರ ಬಳಿ ಸಹಾಯಕನಾಗಿದ್ದೆ. ನನ್ನ ಕೆಲಸದ ಬಗ್ಗೆಯೂ ಅವರಿಗೆ ಮೆಚ್ಚುಗೆ ಇತ್ತು. ಅದೇ ಕಾರಣದಿಂದ ಒಂದು ದಿನ ಸುದೀಪ್ ಸರ್ ಬಳಿಗೆ ಕರೆದುಕೊಂಡು ಹೋದ್ರು. 'ಈ ಹುಡುಗ ಬುದ್ಧಿವಂತ, ನಿಮ್ಮ ಬಳಿ ಸಹಾಯಕನಾಗಿ ಕೆಲಸ ಮಾಡುತ್ತೇನೆ ಎನ್ನುವುದು ಆತನ ಆಸೆ. ಒಂದು ಅವಕಾಶ ಕೊಟ್ಟು ನೋಡಿ ಸರ್' ಅಂದ್ರು. ಅವತ್ತೇ ಅವರು ಓಕೆ ಅಂದ್ರು. ಅಲ್ಲಿಂದ ಸುದೀಪ್ ಸರ್ ಬಳಗದಲ್ಲಿ ನಾನೂ ಒಬ್ಬನಾದೆ.

ಸಹಾಯಕ ನಿರ್ದೇಶಕನಾಗಿದ್ದವನು ಸ್ವತಂತ್ರ ನಿರ್ದೇಶಕನಾಗುವುದು ಹೇಗೆ ಅಂತೆಲ್ಲ ಯೋಚಿಸುತ್ತಿದ್ದೆ. ಸ್ಕ್ರಿಪ್ಟ್ ಮಾಡುತ್ತಿದ್ದೇನೆ ಎನ್ನುವ ವಿಚಾರವನ್ನು ಒಮ್ಮೆ ಸುದೀಪ್ ಅವರ ಬಳಿಯೂ ಚರ್ಚಿಸಿದ್ದೆ. ಆ ಹೊತ್ತಲೇ ಸುದೀಪ್ ಸರ್, ಈ ಸಿನಿಮಾದ ವಿಚಾರ ಪ್ರಸ್ತಾಪ ಮಾಡಿದ್ರು. ಸ್ಕ್ರಿನ್ ಪ್ಲೇ ನಾನೇ ಮಾಡ್ತೀನಿ, ನೀನು ಡೈರೆಕ್ಷನ್ ಮಾಡು ಅಂದ್ರು. ನಿರ್ಮಾಪಕ ಮಂಜು ಅವರು ಕೂಡ ನೀನೇ ಡೈರೆಕ್ಷನ್ ಮಾಡು ಅಂತ ಬೆಂಬಲಿಸಿದರು. ಹಾಗೆಯೇ ಅಂಬರೀಷ್ ಅಣ್ಣ ಕೂಡ ಒಪ್ಪಿಕೊಂಡರು. ಅಲ್ಲಿಂದ ಸಿನಿಮಾಕ್ಕೆ ಚಾಲನೆ ಸಿಕ್ಕಿತು.     

short by Pawan / more at Suvarna News

Comments