Skip to main content


ಬಾಳ ಸಂಗಾತಿ ಜೊತೆಯಲ್ಲಿ ತೆರೆ ಹಂಚಿಕೊಂಡ ಶ್ರುತಿ ಹರಿಹರನ್

ಕನ್ನಡ ನಟಿ ಶ್ರುತಿ ಹರಿಹರನ್ ತಮ್ಮ ಭಾವಿ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ ಅಭಿನಯ ಮಾಡಿದ್ದಾರೆ. 'ಪ್ರೇಮ' ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಅಭಿನಯ ಮಾಡಿದ್ದು ಇತ್ತೀಚಿಗಷ್ಟೆ ವಿಡಿಯೋ ಸಾಂಗ್ ಅನ್ನು ಚಿತ್ರೀಕರಣ ಮಾಡಲಾಗಿದೆ. ಚೆನೈ ನ ಸುತ್ತಾ ಮುತ್ತ 'ಪ್ರೇಮ' ವಿಡಿಯೋ ಸಾಂಗ್ ಚಿತ್ರೀಕರಣ ಮಾಡಿದ್ದು ತೆಲುಗು ಹಾಗೂ ಕನ್ನಡದಲ್ಲಿ ವಿಡಿಯೋ ಹಾಡು ಬಿಡುಗಡೆ ಆಗಲಿದೆ. ಸದ್ಯ ಶೂಟಿಂಗ್ ಮುಗಿಸಿರುವ ತಂಡ ಸೆಪ್ಟೆಂಬರ್ ನಲ್ಲಿ ಹಾಡು ಬಿಡುಗಡೆ ಆಗಲಿದೆ. ಶ್ರುತಿ ಹರಿಹರನ್ ಮದುವೆ ಆಗುತ್ತಿರುವ ಹುಡುಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನೃತ್ಯ ನಿರ್ದೇಶಕ. ಚಿತ್ರರಂಗದವರ ಜೊತೆಯೂ ಉತ್ತಮ ಬಾಂದವ್ಯ ಬೆಳೆಸಿಕೊಂಡಿರುವ ರಾಮ್ ಕುಮಾರ್ ಇದೇ ಮೊದಲ ಬಾರಿಗೆ ತಮ್ಮ ಪ್ರೇಯಸಿ ಜೊತೆ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.   

short by Pawan / more at Filmibeat

Comments