Skip to main content


ಶ್ರೀಮನ್ನಾರಾಯಣನ ಜೊತೆ ಚಿತ್ರ ಮಾಡ್ತಾರಂತೆ ಕೆ.ಮಂಜು!

ಇದೀಗ ತಮ್ಮ ಪುತ್ರನ ಪಡ್ಡೆಹುಲಿ ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ಕೆ. ಮಂಜು ತಮ್ಮ ನಿರ್ಮಾಣದ ಮುಂದಿನ ಚಿತ್ರದ ಬಗೆಗೊಂದು ಹೊಸಾ ಸುದ್ದಿಯನ್ನು ಹರಿಯ ಬಿಟ್ಟಿದ್ದಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಅವರು ರಕ್ಷಿತ್ ಶೆಟ್ಟಿ ನಾಯಕನಾಗಿರೋ ಚಿತ್ರವೊಂದನ್ನು ಸದ್ಯದಲ್ಲಿಯೇ ನಿರ್ಮಾಣ ಮಾಡಲಿದ್ದಾರೆ! ಈಗಾಗಲೇ ಈ ಬಗೆಗಿನ ಎಲ್ಲ ರೀತಿಯ ಮಾತುಕತೆಗಳೂ ಪಕ್ಕಾ ಆಗಿವೆಯಂತೆ. ಶ್ರೀಮನ್ನಾರಾಯಣ ಸೇರಿದಂತೆ ಮತ್ತೊಂದು ಚಿತ್ರವಾದ ನಂತರ ಈ ಚಿತ್ರದಲ್ಲಿ ನಟಿಸಲು ರಕ್ಷಿತ್ ಕೂಡಾ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಯೋಗರಾಜ ಭಟ್ಟರು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ವಾಸ್ತು ಪ್ರಕಾರ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯನ್ನು ನಾಯಕನಾಗಿ ನಟಿಸುವಂತೆ ಮಾಡಿದ್ದ ಯೋಗರಾಜಭಟ್ಟರು ಅವರೊಂದಿಗಿನ ಎರಡನೇ ಚಿತ್ರಕ್ಕೆ ರೆಡಿಯಾಗುತ್ತಿದ್ದಾರಂತೆ. ಈಗಾಗಲೇ ಕಥೆಯೊಂದನ್ನು ಮಾಡಿ ಅದನ್ನು ಮಂಜು ಅವರಿಗೂ ಹೇಳಿದ್ದಾರಂತೆ. ಆ ಕಥೆ ಇಷ್ಟವಾದ ನಂತರವೇ ಈ ಚಿತ್ರದ ಬಗ್ಗೆ ಮಂಜು ವಿವರ ನೀಡಿದ್ದಾರೆ.   

short by Pawan / more at Public Tv

Comments