Skip to main content


ಬೆಂಗಳೂರು ಭೂಗತ ಲೋಕದ ಬಗ್ಗೆ ಮಾತನಾಡಿದ ದಚ್ಚು.!

ಇಲ್ಲಿ ಅದೆಷ್ಟೋ ಮಂದಿ ಒಳ್ಳೆಯವರಾಗಿದ್ದವರು ರೌಡಿಗಳಾಗಿ ಬದಲಾಗಿದ್ದಾರೆ. ಬೆಂಗಳೂರಿನ ಕರಾಳ ರೌಡಿಸಂಗೆ ಇತಿಹಾಸವಿದೆ. ಕೆಲವೊಂದಿಷ್ಟು ಜನ ಜೀವ ಉಳಿಸಿಕೊಳ್ಳೋಕೆ ರೌಡಿಸಂ ಗೆ ಬಂದ್ರೆ ಮತ್ತೊಂದಿಷ್ಟು ಜನ ಪ್ರತಿಷ್ಟೆಗೆ ಬಂದಿದ್ದಾರೆ. ಅದೆಷ್ಟೋ ಮಂದಿ ಹವಾ ಉಳಿಸಿಕೊಂಡಿದ್ದರೆ ಇನ್ನೊಂದಿಷ್ಟು ಮಂದಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಆದ್ರೆ ಈ ರೌಡಿಸಂ ಮೂಲಕ ಹುಡುಕುತ್ತಾ ಹೋದರೆ ಸಿಗೋ ಕಥೆಯೇ ಬೇರೆ. ಪಾರಿವಾಳಗಳ ರೇಸ್ ನಿಂದ ಪ್ರಾರಂಭವಾದ ಈ ರೌಡಿಸಂ. ನಂತರ ಭೂಗತ ಲೋಕವೇ ಆಗಿ ಬಿಡ್ತು. ೩೦ ವರ್ಷದ ರೌಡಿಸಂ ಗೆ ಪಾರಿವಾಳ ರೇಸ್ ಅಂದ್ರೆ ಗಿರಿಬಾಜೆ ಅನ್ನೋ ಒಂದು ರೇಸ್ ಮೂಲ ಅಂದ್ರೆ ತಪ್ಪಾಗಲಿಕ್ಕಿಲ್ಲ. ನೂರಾರು ರೌಡಿಗಳು ಹುಟ್ಟಿಕೊಂಡಿದ್ದೇ ಪಾರಿವಾಳ ರೇಸ್ ನಿಂದ' ಅಂತಾ ಭೂಗತ ಲೋಕದ ಇತಿಹಾಸ ಬಿಚ್ಚಿಟ್ಟಿದ್ದಾರೆ ದರ್ಶನ್. ಇನ್ನು ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಕೂಡ ಗೊತ್ತೇ ಇದೆ. ಈಗಲೂ ದರ್ಶನ್ ಬಳಿ ಪಾರಿವಾಳಗಳಿವೆ. ಹಿಂದೆಯೂ ಕೂಡ ಪಾರಿವಾಳಗಳನ್ನ ಸಾಕಿದ್ದರಂತೆ. ಅಂದ್ರೆ ಈ ಭೂಗತ ಲೋಕ ಅಂದ್ರೇನು ಅನ್ನೋದನ್ನ 'ಬಜಾರ್' ಚಿತ್ರದ ಆಡಿಯೋ ಲಾಂಚ್ ವೇಳೆ ಹೇಳಿದ್ದಾರೆ.   

short by Pawan / more at Balkani News

Comments