Skip to main content


ಮೂರು ದಿನಕ್ಕೆ ಅಯೋಗ್ಯನ ಅಕೌಂಟ್ ಗೆ ಬಂದ ಹಣ ಎಷ್ಟು?

ಕಳೆದ ಶುಕ್ರವಾರ ಬಿಡುಗಡೆಯಾದ 'ಅಯೋಗ್ಯ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಪ್ರೇಕ್ಷಕರ ಜೊತೆಗೆ ವಿಮರ್ಶಕರು ಕೂಡ ಸಿನಿಮಾವನ್ನು ಹೊಗಳುತ್ತಿದ್ದಾರೆ. ಈ ಕಾರಣ ಸಿನಿಮಾದ ಕಲೆಕ್ಷನ್ ಕೂಡ ಚೆನ್ನಾಗಿ ಆಗುತ್ತಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಮೂರು ದಿನ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಸಿನಿಮಾದ ಖಾತೆಗೆ ಸದ್ಯ 4 ಕೋಟಿ ಹಣ ಬಂದಿದೆ. ಮೊದಲ ದಿನ 1.86 ಕೋಟಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ಮೂರು ದಿನಕ್ಕೆ ನಾಲ್ಕು ಕೋಟಿ ಗಳಿಸಿದೆ. 280 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ 'ಅಯೋಗ್ಯ' ಎಲ್ಲ ಭಾಗಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.  

short by Pawan!

Comments