Skip to main content


ಮತ್ತೆ ರಿಚ್ಚಿ ಆಗಲು ಹೊರಟ ರಕ್ಷಿತ್ ಶೆಟ್ಟಿ

'ಅವನೇ ಶ್ರೀಮನ್ನಾರಾಯಣ' ಮತ್ತು '777 ಚಾರ್ಲಿ'ಯಾದ ನಂತರ ನಟ ರಕ್ಷಿತ್ ಶೆಟ್ಟಿ, ನವ ನಿರ್ದೇಶಕ ರಾಹುಲ್ ಪಿ.ಕೆ ಅವರೊಡನೆ 'ರಿಚ್ಚಿ'ಯಾಗಲು ಹೊರಟಿದ್ದಾರೆ. ಪ್ರಸ್ತುತ ಚಿತ್ರದ ಕಥೆ ಬರೆಯುವ ಕೆಲಸದಲ್ಲಿ ನಿರತರಾಗಿರುವ ಇವರು 'ಉಳಿದವರು ಕಂಡಂತೆ' ಚಿತ್ರದ ರಿಚ್ಚಿ ಪಾತ್ರವನ್ನು ಆಧರಿಸಿಕೊಂಡು ಚಿತ್ರ ಮಾಡಲಿದ್ದಾರಂತೆ. ಇನ್ನೂ ಈ ಚಿತ್ರದ ಶೀರ್ಷಿಕೆ ನಿಗದಿಯಾಗಿಲ್ಲ. ರಕ್ಷಿತ್ ಶೆಟ್ಟಿ ನಟರಾಗಿ ಮತ್ತು ನಿರ್ದೇಶಕರಾಗಿ 'ಉಳಿದವರನ್ನು ಕಂಡಂತೆ' ಚಿತ್ರವನ್ನು ಮಾಡಿದ್ದರು. ಇನ್ನು ಈ ಚಿತ್ರದ ರಿಚ್ಚಿ ಪಾತ್ರ ಸಾಕಷ್ಟು ಜನರಿಗೆ ಸಖತ್ ಇಷ್ಟ ಆಗಿತ್ತು.ಆನಂತರ 'ಬಹುಪರಾಕ್' ಚಿತ್ರದಲ್ಲಿ ಅದೇ ಪಾತ್ರದಲ್ಲಿ ನಟಿಸಿದ್ದರು. ಈಗ ಮೂರನೇ ಬಾರಿಗೆ ಮತ್ತೊಮ್ಮೆ 'ರಿಚ್ಚಿ'ಯಾಗಿ ಕಾಣಿಸಿಕೊಳ್ಳಲಿದ್ದಾರೆ.    

short by Pawan / more at Balkani News

Comments