Skip to main content


ಮೊಟ್ಟ ಮೊದಲ ಬಾರಿಗೆ ವಿಶಿಷ್ಟ ಪಾತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ.!

ಪ್ರತಿಭಾವಂತ ಯುವ ನಿರ್ದೇಶಕ ಭುವನ್ ನಾಯಕ್ ಆಕ್ಷನ್ ಕಟ್ ಹೇಳಲು ಹೊರಟಿರುವ ಹೊಸ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಆದ್ರೆ, ಪ್ರಿಯಾಂಕಾ ಉಪೇಂದ್ರ ರವರಿಗೆ ಮಾತ್ರ ತಮ್ಮ ಪಾತ್ರ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇದೇ ಮೊದಲ ಬಾರಿಗೆ ನಟಿ ಪ್ರಿಯಾಂಕಾ ಉಪೇಂದ್ರ ಅವಳಿ-ಜವಳಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟ್ವಿನ್ಸ್ ಆಗಿ ನಟಿಸುವುದು ಅಷ್ಟು ಸುಲಭ ಅಲ್ಲ. ತುಂಬಾ ಚಾಲೆಂಜಿಂಗ್ ಆಗಿರುವ ಈ ಪಾತ್ರವನ್ನ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ನಟಿ ಶರ್ಮಿಳಾ ಮಾಂಡ್ರೆ, ಭಾವನಾ ರಾವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೋಸ್ಕರ ಇವರಿಬ್ಬರೂ ಬೈಕ್ ಓಡಿಸುವುದನ್ನು ಕಲಿಯುತ್ತಿದ್ದಾರಂತೆ.     

short by Pawan / more at Filmibeat

Comments