Skip to main content


ಮದುವೆ ಬಗ್ಗೆ ಮಾತನಾಡಿದ ನಟಿ ಹರಿಪ್ರಿಯಾ !

ನಟಿ ಹರಿಪ್ರಿಯಾ ಕುಟುಂಬ ಸಮೇತರಾಗಿ ಇಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ್ರು. ಇಲ್ಲಿಯ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದ್ರು. ಇದೇ ವೇಳೆ ಮಾಧ್ಯಮಗಳಿಗೆ ಮಾತನಾಡಿರುವ ಅವರು, ಚಿತ್ರೀಕರಣಗಳಲ್ಲಿ ಬ್ಯೂಸಿಯಿದ್ದ ಹಿನ್ನೆಲೆ ರಾಯರ ಮಠಕ್ಕೆ ಭೇಟಿ ಸಾಧ್ಯವಾಗಿರಲಿಲ್ಲ. ಈಗ ಅಣ್ಣ ಹಾಗೂ ಅಮ್ಮನ ಜತೆ ಬಂದು ರಾಯರ ದರ್ಶನ ಮಾಡಿರುವುದು ಖುಷಿ ನೀಡಿದೆ ಎಂದರು. ಇನ್ನು ತಮ್ಮ ಚಿತ್ರಗಳ ಬಗ್ಗೆ ಮಾತನಾಡಿ, ಕುರುಕ್ಷೇತ್ರ, ಬೆಲ್ ಬಾಟಮ್, ಸೂಜಿದಾರ, ಡಾಕ್ಟರ್ ಆಫ್ ಪಾರ್ವತಮ್ಮ ಸೇರಿ ಹಲವು ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ಬೆಲ್ ಬಾಟಲ್ ಸಿನಿಮಾ ಹಳೆ ಕಾಲದ ಚಿತ್ರದಂತಿದೆ. ಇನ್ನೆರೆಡು ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತೆ ಎಂದರು. ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಸದ್ಯಕ್ಕೆ ಸಿನಿಮಾಗಳ ಮೇಲೆ ಗಮನ ಹರಿಸಿದ್ದೇನೆ, ಯಾವಾಗ ಏನು ಆಗುತ್ತೆ ಅಂತಾ ಹೇಳಲಿಕ್ಕೆ ಆಗೋಲ್ಲ , ಅದರ ಬಗ್ಗೆ ಈಗ ಮಾತು ಬೇಡ ಎಂದು ನಗುತ್ತಲೇ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ರು.   

short by Pawan!

Comments