Skip to main content


ಕನ್ನಡಕ್ಕೆ ಬರಲಿದ್ದಾರಾ ಅಮಿತಾಬ್‌ ಬಚ್ಚನ್‌?

ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಕನ್ನಡ ಸಿನಿಮಾದಲ್ಲಿ ಮತ್ತೆ ನಟಿಸಲಿದ್ದಾರಾ? ಹೀಗೊಂದು ಪ್ರಶ್ನೆ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಕಾರಣ ನಿರ್ದೇಶಕ ರಿಷಬ್‌ ಶೆಟ್ಟಿ ಅಮಿತಾಬ್‌ರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ. ಅಮಿತಾಬ್‌ ಬಚ್ಚನ್‌ ಈ ಮೊದಲು ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಗೆಸ್ಟ್‌ರೋಲ್‌ನಲ್ಲಿ ನಟಿಸಿದ್ದರು. ಅಮಿತಾಬ್‌ಗೆಂದೇ ಹೊಸ ಕತೆಯೊಂದನ್ನು ಬರೆದಿರುವ ರಿಷಬ್‌ ಸ್ಕ್ರಿಪ್ಟ್‌ ಹಿಡಿದು ಮುಂಬೈಗೆ ಹೋಗಿದ್ದಾರೆ. ಈಗಾಗಲೆ ಅಮಿತಾಬ್‌ರನ್ನು ಭೇಟಿ ಮಾಡಿ ಕತೆಯನ್ನೂ ಹೇಳಿದ್ದಾರಂತೆ. 'ಸ್ಕ್ರಿಪ್ಟ್‌ ಮೊದಲ ಭಾಗವನ್ನು ಅಮಿತಾಬ್‌ ಕೇಳಿಸಿಕೊಂಡಿದ್ದಾರೆ. ಇಷ್ಟಪಟ್ಟಿದ್ದಾರೆ. ಮಾತುಕತೆ ನಡೆದಿದೆ' ಎಂದಿದ್ದಾರೆ. ಕತೆಯನ್ನು ಇನ್ನೂ ಪೂರ್ಣವಾಗಿಲ್ಲ ಎಂದಿದ್ದಾರೆ ರಿಷಬ್‌.   

short by Pawan!

Comments