Skip to main content


ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ಬಿಗ್ ಶಾಕ್, ಪೊಲೀಸರಿಂದ ನೋಟಿಸ್ ಕಾರಣ ಏನು ಗೊತ್ತಾ?

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ಮಾದಕ ವಸ್ತುಗಳ ಸೇವನೆಗೆ ಪ್ರಚೋಧನೆ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಸಿಸಿಬಿ ಪೋಲಿಸರು ನೋಟಿಸ್ ನೀಡಿದ್ದಾರೆ. ಚಂದನ್ ಶೆಟ್ಟಿ ಇತ್ತೀಚಿಗೆ ಅಂತ್ಯ ಎಂಬಾ ಶೀರ್ಷಿಕೆಯಡಿ ಸಾಂಗ್ ವೊಂದನ್ನ ರೀಲಿಸ್ ಮಾಡಿದ್ದರು. ಆ ಹಾಡಿನಲ್ಲಿ ಮಾದಕವಸ್ತುಗಳ ಸೇವನೆಯನ್ನು ಪ್ರಚೋದನೆ ಮಾಡುವ ದೃಶ್ಯಗಳನ್ನು ಒಳಗೊಂಡಿರುವ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರುಚಂದನ್ ಶೆಟ್ಟಿಗೆ ಇದೇ ತಿಂಗಳ 23ರಂದು ನೋಟಿಸ್ ನೀಡಿದ್ದು, ಮರು ದಿವಸ ಅಂದ್ರೆ 24ರಂದು ಹಾಜರಾಗುವಂತೆ ಹೇಳಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧಪಟ್ಟಂತೆ ಚಂದನ್ ಶೆಟ್ಟಿ ಇಲ್ಲಿ ತನಕ ಯಾವುದೇ ಪ್ರತಿಕ್ರಿಯೆಗಳನ್ನು ನೀಡದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

short by Nithin

Comments