Skip to main content


ಹೆಣ್ಣು ಮಗುವಿನ ತಾಯಿಯಾದ್ರು ಅನು

ನಟಿ ಅನುಪ್ರಭಾಕರ್​ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅನು ಹಾಗೂ ರಘುಮುಖರ್ಜಿ ದಂಪತಿ ಟ್ವೀಟ್​ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆಂದು ರಘು ಮುಖರ್ಜಿ ತಿಳಿಸಿದ್ದಾರೆ. ಈ ಹಿಂದೆ ರಘು ಅನುಪ್ರಭಾಕರ್​ ಗರ್ಭಿಣಿಯಾಗಿದ್ದಾಗಿನ ಫೋಟೋ ಶೇರ್​ ಮಾಡಿ, ಮಹಿಳೆ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ಅನು ಕೂಡ ಈಗಾಗಲೇ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದು ಈಗ ತಾಯಿಯಾಗುತ್ತಿದ್ದಾಳೆ ಎಂದು ಟ್ವೀಟ್​ ಮಾಡಿದ್ದರು. ಈಗ ಹೆಣ್ಣುಮಗುವಿನ ಜನನವಾಗಿದ್ದು ಎರಡೂ ಕುಟುಂಬಗಳೂ ಸಂತೋಷ ವ್ಯಕ್ತಪಡಿಸಿದ್ದಾರೆ.   

short by Pawan!

Comments