Skip to main content


ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ "ಹೀಗೆ" ಹೇಳಿದರು..!

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿಯೂ ಸಿಕ್ಕಾಪಟ್ಟೆ ಫೇಮಸ್. ನಿನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಫೇಸ್ ಬುಕ್ ಲೈವ್ ಗೆ ಬಂದಿದ್ದಾಗ, ''ಸುದೀಪ್ ಜೊತೆ ನಟಿಸಿ, ಪುನೀತ್ ಜೊತೆ ಇನ್ನೊಂದು ಸಿನಿಮಾ ಮಾಡಿ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿ ಬಂದವು. ''ನಿಮಗೆ ಸುದೀಪ್ ಜೊತೆ ನಟಿಸುವುದು ಇಷ್ಟನಾ.?'' ಅಂತ ಅಭಿಮಾನಿಯೊಬ್ಬರು ಫೇಸ್ ಬುಕ್ ಲೈವ್ ನಲ್ಲಿ ರಶ್ಮಿಕಾ ಮಂದಣ್ಣ ರನ್ನ ಕೇಳಿದರು. ಅದಕ್ಕೆ ಆಕೆ ಕೊಟ್ಟ ಉತ್ತರ - ''ಖಂಡಿತ ಇಷ್ಟ. ಆದಷ್ಟು ಬೇಗ ಅಂತಹ ಅವಕಾಶ ಸಿಗಲಿ ಎನ್ನುವುದು ನನ್ನ ಬಯಕೆ''. ''ಡಿ-ಬಾಸ್ ದರ್ಶನ್ ಬಗ್ಗೆ ಏನಾದರೂ ಹೇಳಿ..'' ಎಂದು ಓರ್ವ ಫ್ಯಾನ್ ಕೇಳಿದಕ್ಕೆ, ''He is amazing human being'' ಅಂತ ಉತ್ತರಿಸಿದರು ನಟಿ ರಶ್ಮಿಕಾ ಮಂದಣ್ಣ. 'ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಹೇಳಿ...'' ಎಂದು ಅಭಿಮಾನಿಯೊಬ್ಬರು ಕೇಳಿದಾಗ, ''I'm glad that i know ಪುನೀತ್ ಸರ್ ಪರ್ಸನಲಿ. ಇನ್ನೊಮ್ಮೆ ಚಾನ್ಸ್ ಸಿಕ್ಕರೆ, ಖಂಡಿತ ಅವರ ಜೊತೆ ಆಕ್ಟ್ ಮಾಡುವೆ'' ಎಂದರು ನಟಿ ರಶ್ಮಿಕಾ.   

short by Pawan / more at Filmibeat

Comments