Skip to main content


ಸೀತಾರಾಮ ಕಲ್ಯಾಣ ಚಿತ್ರ ತೆಲುಗಿನ ಸರೈನೋಡು ಚಿತ್ರದ ರಿಮೇಕಾ? ಇದಕ್ಕೆ ನಿಖಿಲ್ ಏನಾಂತಾರೆ!

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವುದು ಸಹೋದರರಾದ ರಾಮ್ ಮತ್ತು ಲಕ್ಷ್ಮಣ್ ಎಂಬುವರು. ಇವರಿಬ್ಬರು ತೆಲುಗಿನ ಖ್ಯಾತ ಸಾಹಸ ನಿರ್ದೇಶಕರು. ಸರೈನೋಡು ಚಿತ್ರಕ್ಕೆ ರಾಮ್ ಮತ್ತು ಲಕ್ಷ್ಮಣ್ ಅವರೇ ಸಾಹಸ ನಿರ್ದೇಶನ ಮಾಡಿದ್ದರು. ಇದೀಗ ಆ ಚಿತ್ರದಲ್ಲಿ ಬಳಸಿದ್ದ ಸಾಹಸ ದೃಶ್ಯಗಳನ್ನೇ ಸೀತಾರಾಮ ಕಲ್ಯಾಣ ಚಿತ್ರದಲ್ಲೂ ಬಳಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರದ ನಾಯಕ ನಿಖಿಲ್ ಕುಮಾರ್, ಪ್ರತಿಯೊಬ್ಬ ಸಾಹಸ ನಿರ್ದೇಶಕರಿಗೂ ತಮ್ಮದೇ ಸ್ವಂತ ಮಾದರಿ ಇರುತ್ತದೆ. ಅಂತೆ ತೆಲುಗಿನಲ್ಲಿ ಅವರ ಸಾಹಸ ನಿರ್ದೇಶನವನ್ನು ಕನ್ನಡ ಪ್ರೇಕ್ಷಕರು ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ಇನ್ನು ತೆಲುಗಿಗಿಂತ ಉತ್ತಮವಾಗಿ ಕನ್ನಡದಲ್ಲಿ ಫೈಟ್ ಸೀನ್ ಗಳನ್ನು ತೆಗೆಯಲಾಗಿದೆ. ನಮ್ಮ ಪ್ರಯತ್ನ ಕನ್ನಡದ ಪ್ರೇಕ್ಷಕರನ್ನು ಮತ್ತು ಜನರನ್ನು ಸಂತೋಷಪಡಿಸುವುದು ಎಂದು ಹೇಳಿದ್ದಾರೆ.    

short by Pawan / more at Kannada Prabha

Comments