Skip to main content


ಈ ಚಿತ್ರದಲ್ಲಿ ರವಿಚಂದ್ರನ್ ಅವ್ರಿಗೆ ಹಾಡು, ಹೀರೋಯಿನ್ ಎರಡೂ ಇಲ್ಲ

ನಟ ರವಿಚಂದ್ರನ್ ಸಿನಿಮಾ ಎಂದ ತಕ್ಷಣ ಹಾಡುಗಳು ನೆನಪಾಗುತ್ತದೆ. ಆ ಹಾಡಿನಲ್ಲಿ ಅವರ ಜೊತೆಗೆ ಕುಣಿಯುವ ನಟಿಯರು ಕಣ್ಣು ಮುಂದೆ ಬರುತ್ತಾರೆ. ಆದರೆ, ಸದ್ಯ ರವಿಚಂದ್ರನ್ ನಟಿಸುತ್ತಿರುವ ಸಿನಿಮಾದಲ್ಲಿ ಅವರಿಗೆ ಹಾಡು ಮತ್ತು ನಟಿಯರು ಎರಡೂ ಇಲ್ಲ. ಹೌದು, ರವಿಚಂದ್ರನ್ ಇದೀಗ 'ರವಿಚಂದ್ರ' ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ನಾಯಕರಾಗಿದ್ದು, ಅವರ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರು ಕೂಡ ಉಪ್ಪಿಯ ಜೋಡಿಯಾಗಿದ್ದಾರೆ. ಈ ಸಿನಿಮಾ ತೆಲುಗಿನ 'ಬಲುಪು' ಚಿತ್ರದ ರಿಮೇಕ್ ಆಗಿದೆ.       

short by Pawan!

Comments