Skip to main content


ಅಭಿಮಾನಿಗಳಿಂದ ಈಗಿನಿಂದಲೇ ಸಿದ್ಧತೆ... ಈ ವರ್ಷವಾದ್ರೂ ಬರ್ತ್​ ಡೇ ಆಚರಿಸಿಕೊಳ್ತಾರಾ ಸುದೀಪ್​?

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್​ ನಟರುಗಳ ಬರ್ತ್​ ಡೇ ಹಬ್ಬದಂತೆ ನಡೆಯುತ್ತೆ. ಇದಕ್ಕೆ ಸ್ಪಷ್ಟ ನಿದರ್ಶನ ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟುಹಬ್ಬ. ಪ್ರತಿವರ್ಷ ಇವರ ಜನ್ಮ ದಿನವನ್ನು ಅಭಿಮಾನಿಗಳು ಗ್ರ್ಯಾಂಡ್​ ಆಗಿ ಆಚರಿಸುತ್ತಾರೆ. ಇದೀಗ ಮುಂದಿನ ತಿಂಗಳು ಸುದೀಪ್ ಅವರ ಹುಟ್ಟುಹಬ್ಬವಿದ್ದು, ಇದರ ಸೆಲೆಬ್ರೇಷನ್​ಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಬರುವ ಸೆಪ್ಟೆಂಬರ್​ 2 ರಂದು ಸುದೀಪ್ 45 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಇನ್ನೂ 25 ದಿನಗಳು ಬಾಕಿ ಇರುವಾಗಲೇ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈಗಿನಿಂದಲೇ ಟ್ವಿಟರ್, ಫೇಸ್​ಬುಕ್​ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಷಯಗಳ ಪೋಸ್ಟ್​ಗಳು ಹರಿದಾಡುತ್ತಿವೆ. ಕಿಚ್ಚನ ಹುಡುಗರು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. 

short by Pawan / more at Eenadu India

Comments