Skip to main content


ಭೀಮಸೇನನ ಅಡುಗೆ ರೆಡಿ!!?

ಭೀಮಸೇನ ನಳಮಹಾರಾಜ, ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೇಮಂತ್ ರಾವ್ ನಿರ್ಮಾಣದ ಸಿನಿಮಾ. ಕಾರ್ತಿಕ್ ಸರಗೂರು ನಿರ್ದೇಶಿಸಿರುವ ಸಿನಿಮಾ. ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ರೆಡಿಯಾಗಿರುವ ಚಿತ್ರಕ್ಕೆ ಅರವಿಂದ್ ಅಯ್ಯರ್ ನಾಯಕ. ಆರೋಹಿ ನಾರಾಯಣ್ ಮತ್ತು ಪ್ರಿಯಾಂಕ್ ತಿಮ್ಮೇಶ್ ನಾಯಕಿಯರು. ಭೀಮಸೇನ ನಳಮಹಾರಾಜ, ತಿನ್ನುವವರು ಮತ್ತು ಬೇಯಿಸುವವರ ನಡುವಿನ ಕಥೆಯಂತೆ. ಒಬ್ಬ ಅಡುಗೆಭಟ್ಟ, ತನ್ನ ಕುಟುಂಬ ರಕ್ಷಿಸಿಕೊಳ್ಳಲು ಯಾವ ಹಂತಕ್ಕೆ ಹೋಗುತ್ತಾನೆ ಎನ್ನುವುದೇ ಚಿತ್ರದ ಕಥೆ. ಉಪ್ಪು, ಹುಳಿ, ಖಾರ, ಸಿಹಿ ಮತ್ತು ಒಗರನ್ನು ಹದವಾಗಿ ಬೆರೆಸಿರುವ ಚಿತ್ರ ಎಂದು ಹೇಳಿಕೊಳ್ತಾರೆ ನಿರ್ದೇಶಕ ಕಾರ್ತಿಕ್.   

short by Pawan / more at Chitraloka

Comments