Skip to main content


ಆಯಮಿ ಜಾಕ್ಸನ್ ಜೊತೆ ಪ್ರೇಮ್ ಹೇಗೆ ಮಾತನಾಡುತ್ತಿದ್ದರು ಗೊತ್ತಾ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರ ಬಿಡುಗಡೆಗೂ ಮುನ್ನ ಸಖತ್ ಜನಪ್ರಿಯತೆ ಪಡೆದಿದೆ. ನಿರ್ದೇಶಕ ಪ್ರೇಮ್ ತಮ್ಮ 'ದಿ ವಿಲನ್' ಚಿತ್ರದ ನಾಯಕಿ ಆಯಮಿ ಜಾಕ್ಸನ್ ಜೊತೆಗೆ ಹೇಗೆ ಮಾತನಾಡುತ್ತಿದ್ದರು ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇದೆ. ಆದರೆ ಆ ಕುತೂಹಕ್ಕೆ ಸುದೀಪ್ ತೆರೆ ಎಳೆದಿದ್ದಾರೆ.. ಆಯಮಿ ಜೊತೆಗೆ ಪ್ರೇಮ್ ಹೇಗೆ ಮಾತನಾಡುತ್ತಿದ್ದರು ಎಂಬುದನ್ನು ಇತ್ತೀಚೆಗೆ ನಡೆದ 'ದಿ ವಿಲನ್' ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ವಿವರಿಸಿದ್ದಾರೆ.  ಪ್ರೇಮ್ ಆಯಮಿ ಜಾಕ್ಸನ್ ಅವರನ್ನು ಕರೆಯುತ್ತಿದ್ದುದೇ, ಏಮಿ ಎಂದು. ಚಿತ್ರೀಕರಣದಲ್ಲಿ ಆಯಮಿ ಏನಾದರೂ ಪ್ರೇಮ್‍ ರನ್ನು ಕರೆದರೆ, ಪ್ರೇಮ್ ಓಡಿ ಬಂದು, ಯಸ್ ಏಮಿ, ವಾಟ್ …' ಎನ್ನುತ್ತಿದ್ದರಂತೆ. ಇನ್ನು ಆಯಮಿ ಏನಾದರೂ ಇಂಗ್ಲಿಷ್‍ನಲ್ಲಿ ಮಾತಾಡಿಬಿಟ್ಟರೆ, ಅದು ಅರ್ಥವಾಗದ ಪ್ರೇಮ್ ತಮ್ಮ ಸಹಾಯಕರನ್ನು ಕರೆದು, 'ಆಯಮ್ಮನಿಗೆ ಸೀನ್ ಹೇಳ್ರೋ …' ಎನ್ನುತ್ತಿದ್ದರಂತೆ. ಕೊನೆಗೆ ಅದೂ ಸಾಧ್ಯವಾಗದಿದ್ದಾಗ, ಪ್ರೇಮ್ ತಮ್ಮದೇ ಸ್ಟೈಲ್​​ನ ಇಂಗ್ಲಿಷ್​ನಲ್ಲಿ, ಏಮಿ ಜಾಕ್ಸನ್ ಯು ಸೀ, ಜಸ್ಟ್ ಯೂ ಫಾಲ್ ಆಯಂಡ್ ಲುಕ್ ಆಯಂಡ್ ಗೋ …' ಎಂದು ಹೇಳುತ್ತಿದ್ದರಂತೆ.

short by Nithin / more at Balkani News

Comments