Skip to main content


ಸ್ಯಾಂಡಲ್​ವುಡ್​ನಲ್ಲಿ ಸೂಪರ್​ ಸ್ಟಾರ್​ ಟೈಟಲ್​ ವಿವಾದ: ಕ್ಷಮೆ ಕೇಳೋಲ್ಲವೆಂದ ಜೆಕೆ

ಸ್ಯಾಂಡಲ್ ವುಡ್​ನಲ್ಲಿ ಮತ್ತೊಂದು ಟೈಟಲ್​ ವಿವಾದ ಶುರುವಾಗಿದೆ. ಜೆಕೆ ಅಭಿನಯದ ಮೇ ಫಸ್ಟ್​ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಟೈಟಲ್​ನ್ನು ಜೆಕೆ ಹೆಸರಿನ ಮುಂದಿಟ್ಟಿರುವುದಕ್ಕೆ ರಿಯಲ್​ ಸ್ಟಾರ್​ ಉಪೇಂದ್ರ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಸೂಪರ್​ ಸ್ಟಾರ್​ ಟೈಟಲ್​ ಉಪ್ಪಿ ಅವರಿಗೆ ಸೇರಿದೆ. ಬುದ್ಧಿವಂತನ ಸಹನೆ ಪರೀಕ್ಷೆ ಮಾಡಬೇಡಿ. ಆ ಟೈಟಲ್​ ಬಳಸಿಕೊಂಡಿದ್ದಕ್ಕೆ ಉಪೇಂದ್ರ ಅವರ ಬಳಿ ಕ್ಷಮೆ ಕೇಳಬೇಕು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕುವ ಮೂಲಕ ಆಗ್ರಹಿಸಿದ್ದಾರೆ. ಹಿಂದೊಮ್ಮೆ ಮಾಸ್ತಿಗುಡಿ ಚಿತ್ರದಲ್ಲಿ ದುನಿಯಾ ವಿಜಯ್​ಗೆ ಸೂಪರ್​ ಸ್ಟಾರ್​ ಟೈಟಲ್​ ನೀಡಲಾಗಿತ್ತು. ಆಗಲೂ ಉಪೇಂದ್ರ ಅಭಿಮಾನಿಗಳು ತಿರುಗಿ ಬಿದ್ದಿದ್ದರಿಂದಲೇ ಅದನ್ನು ವಾಪಸ್​ ಪಡೆಯಲಾಗಿತ್ತು. ಈಗ ಜಯರಾಮ್​ ಕಾರ್ತೀಕ್​ ವಿರುದ್ಧ ಉಪ್ಪಿ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.    

short by Pawan / more at Vijayavani

Comments