Skip to main content


ರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾ

ರಶ್ಮಿಕಾ ಮತ್ತು ರಕ್ಷಿತ್ ಮದುವೆ ಆಗಲ್ಲ. ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ. ಹಾಗೆ, ಹೀಗೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇದೆ. ಇದುವರೆಗೂ ಈ ಬಗ್ಗೆ ಈ ಇಬ್ಬರು ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ, ನಟಿ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿದು ಬಿದ್ದಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ಎಂಗೇಜ್ ಮೆಂಟ್ ಬ್ರೇಕ್ ಅಪ್ ಸುದ್ದಿ ಸುಳ್ಳು. ''ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಎಂಗೇಜ್ ಮೆಂಟ್ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳು ನನ್ನ ಕಿವಿಗೂ ಬಿತ್ತು. ಈ ಸುದ್ದಿ ಕೇಳಿ ನಾನು ನಕ್ಕಿದ್ದೀನಿ. ಯಾಕಂದ್ರೆ, ರಕ್ಷಿತ್ ಮತ್ತು ನನ್ನ ಮಧ್ಯೆ ತುಂಬಾ ಉತ್ತಮವಾದ, ಗಟ್ಟಿಯಾದ ಸಂಬಂಧವಿದೆ. ಹೀಗಾಗಿ, ಇದನ್ನ ನಾನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ'' ಎಂದು ರಶ್ಮಿಕಾ ತಿಳಿಸಿದ್ದಾರೆ.     

short by Pawan / more at Filmibeat

Comments