Skip to main content


ಯಶ್​ ಕೆಜಿಎಫ್​ಗೆ ಮತ್ತೊಬ್ಬ ನಟಿ... ಈ ನಟಿಮಣಿಯರಲ್ಲಿ ಯಾರಿಗೆ ಸಿಗುತ್ತೆ ಅದೃಷ್ಟ ?

ಸ್ಯಾಂಡಲ್​ವುಡನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಕೆಜೆಎಫ್​ ಚಿತ್ರ ಕೊನೆಗೂ ಚಿತ್ರೀಕರಣ ಮುಗಿಸಿಕೊಳ್ಳುತ್ತಿದೆ. ಈ ನಡುವೆ ಕೆಜಿಎಫ್​​ನಲ್ಲಿ ಮತ್ತೊಬ್ಬ ನಟಿಯ ಎಂಟ್ರಿ ಆಗಲಿರುವ ಸುದ್ದಿ ಚಿತ್ರತಂಡದಿಂದ ಹೊರ ಬಂದಿದೆ. ರೆಟ್ರೋ ಸಾಂಗ್ ಶೂಟ್​ನಲ್ಲಿ ಅತಿಥಿ ಪಾತ್ರದಲ್ಲಿ ಓರ್ವ ನಟಿಮಣಿ ಯಶ್​ ಜತೆ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ನಟಿ ಕಾಜಲ್ ಅಗರ್​ವಾಲ್​, ರಾಯ್​ ಲಕ್ಷ್ಮಿ ,ತಮನ್ನಾ ಭಾಟಿಯಾ ಹಾಗೂ ನೋರಾ ಫತೇಹಿ ಅವರಿಗೆ ಚಿತ್ರತಂಡ ಆಫರ್​ ಮಾಡಿದೆಯಂತೆ. ಯಶ್​ ಜತೆ ತೆರೆ ಹಂಚಿಕೊಳ್ಳಲು ಈ ಎಲ್ಲ ನಟಿಯರು ಉತ್ಸುಕರಾಗಿದ್ದಾರಂತೆ. ಆದರೆ, ಯಾವ ನಟಿಗೆ ರಾಕಿಂಗ್​ ಸ್ಟಾರ್ ಜತೆ ನಟಿಸುವ ಅದೃಷ್ಟ ಸಿಗಲಿದೆ ಎನ್ನುವುದು ಆಗಸ್ಟ್​ 7 ರಂದು ಗೊತ್ತಾಗಲಿದೆ.  

short by Pawan!

Comments