Skip to main content


ನೆಗೆಟಿವ್ ಕಾಮೆಂಟ್ಸ್ ನೋಡಿ ಮಜಾ ಟಾಕೀಸ್ ಬಿಡಲು ಮುಂದಾಗಿದ್ದ ವರಲಕ್ಷ್ಮಿ!

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಬಿಲ್ಡಪ್ ತೆಗೆದುಕೊಳ್ಳುವುದು, ಶೋ ಆಫ್ ಮಾಡುವುದೇ 'ಒನ್ ಅಂಡ್ ಒನ್ಲಿ ವರಲಕ್ಷ್ಮಿ' ಕೆಲಸ. ವರಲಕ್ಷ್ಮಿ ಪಾತ್ರದಲ್ಲಿ ನಟಿ ಅಪರ್ಣ ರವರನ್ನ ನೋಡಿ ಕೆಲವರು ನೆಗೆಟಿವ್ ಕಾಮೆಂಟ್ಸ್ ಮಾಡಿದ್ದರು. ಅದನ್ನೆಲ್ಲ ಓದಿದ್ಮೇಲೆ, ಕಾರ್ಯಕ್ರಮದಿಂದ ಹೊರ ಬರಲು ಅಪರ್ಣ ಮನಸ್ಸು ಮಾಡಿದ್ದರಂತೆ. ''ಒಂದೆರಡು ಸಂಚಿಕೆ ಆದ್ಮೇಲೆ, ಕೆಲವು ಕಾಮೆಂಟ್ ಗಳನ್ನು ನೋಡಿ, ಇದು ನನಗೆ ಬೇಡ, 'ಮಜಾ ಟಾಕೀಸ್' ಬಿಟ್ಟು ಬಿಡುತ್ತೇನೆ ಎಂದು ಸೃಜನ್ ಗೆ ಹೇಳಿದ್ದೆ'' ಎಂದು ವರಲಕ್ಷ್ಮಿ ಪಾತ್ರದ ಖ್ಯಾತಿಯ ಅಪರ್ಣ ಹೇಳಿದ್ದಾರೆ. ''ವರಲಕ್ಷ್ಮಿ ಪಾತ್ರಕ್ಕೆ ಅಪರ್ಣ ಸೂಟ್ ಆಗಲ್ಲ. ಪಾತ್ರ ತುಂಬಾ ಸಿಲ್ಲಿ ಆಗಿದೆ. ಅಪರ್ಣ ತುಂಬಾ ಗಂಭೀರವಾಗಿರುತ್ತಾರೆ' ಎಂಬೆಲ್ಲ ಕಾಮೆಂಟ್ಸ್ ನೋಡಿ ಮುಂದುವರೆಯುವುದು ಬೇಡ ಅಂದುಕೊಂಡಿದ್ದೆ'' ಅಂತಾರೆ ಅಪರ್ಣ. ''ಮಜಾ ಟಾಕೀಸ್' ಒಂದು ಒಳ್ಳೆಯ ಶೋ. ನನ್ನಿಂದ ಶೋ ಹಾಳಾಗುವುದು ಬೇಡ. ಕೆಟ್ಟ ಕಾಮೆಂಟ್ಸ್ ಬರುತ್ತಿದೆ. ಹೀಗಾಗಿ ಮಾಡುವುದಿಲ್ಲ'' ಎಂದು ಸೃಜನ್ ಬಳಿ ಅಪರ್ಣ ಹೇಳಿದ್ದರಂತೆ.   

short by Pawan / more at Filmibeat

Comments