Skip to main content


ಮಹೇಶ್ ಬಾಬು ಬಳಿಕ ರಶ್ಮಿಕಾ ಚಿತ್ರವನ್ನು ಹೊಗಳಿದ ರಾಮ್ ಚರಣ್

ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ 'ಗೀತಾ ಗೋವಿಂದಂ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು ಚಿತ್ರರಂಗದ ಬಿಗ್ ಸ್ಟಾರ್ ಗಳು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ, ರಾಮ್ ಚರಣ್ ಈ ಚಿತ್ರದ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ''ಅರ್ಜುನ್ ರೆಡ್ಡಿ' ಸಿನಿಮಾದ ನಂತರ ಸೂಕ್ತ ಪಾತ್ರವನ್ನು ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ನೋಡುವುದು ತುಂಬ ಖುಷಿ ಆಗುತ್ತದೆ. ಇಬ್ಬರೂ ಸಹಜವಾಗಿ ನಟಿಸಿದ್ದಾರೆ. ಅವರ ಅಭಿನಯ ಚಿತ್ರದ ಸುಂದರ ಕಥೆಯನ್ನು ಪೂರ್ಣಗೊಳಿಸಿದೆ. ಸಿನಿಮಾದ ಸಂಗೀತ ಚೆನ್ನಾಗಿದೆ. ಒಳ್ಳೆಯ ಕಥೆಯನ್ನು ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ.'' ಎಂದು ರಾಮ್ ಚರಣ್ ಬರೆದುಕೊಂಡಿದ್ದಾರೆ.  

short by Pawan / more at Filmibeat

Comments