Skip to main content


ದಿ ವಿಲನ್ ನಂತರ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಶಿವಣ್ಣ-ಸುದೀಪ್..!!!

ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರಕ್ಕೂ ಮುನ್ನ ಸದ್ದು ಮಾಡಿದ್ದು 'ಕಲಿ' ಚಿತ್ರ.  ಆರ್ .ಮನೋಹರ್ ಅವರ ನಿರ್ಮಾಣದಲ್ಲಿಯೇ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದರು ಪ್ರೇಮ್. 'ದಿ ವಿಲನ್' ಚಿತ್ರದ ಜೋಡಿಯೇ ಇಲ್ಲಿಯೂ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಿಂತುಕೊಂಡ ನಂತರ ಮತ್ತೆ 'ದಿ ವಿಲನ್' ನಲ್ಲಿ ಶಿವಣ್ಣ ಮತ್ತು ಸುದೀಪ್ ರನ್ನು ಒಂದಾಗಿಸಿದ್ದರು ನಿರ್ದೇಶಕ ಪ್ರೇಮ್. ಇದೀಗ ಮತ್ತೆ 'ಕಲಿ'ಗೆ ಜೀವ ಬಂದಿದ್ದು, ನಿರ್ಮಾಪಕ ಆರ್. ಮನೋಹರ್ ಅವರೇ ಈ ಚಿತ್ರವನ್ನು ಮುಂದುವರೆಸಿ, ಮತ್ತೊಮ್ಮೆ ಈ ಜೋಡಿಗಳನ್ನು ಒಂದಾಗಿಸಲಿದ್ದಾರೆ. ''ಕಲಿ' ಚಿತ್ರವು ಹೆಚ್ಚು ಗ್ರಾಫಿಕ್ಸ್ ತಂತ್ರಜ್ಞಾನವನ್ನು ಒಳಗೊಂಡು ಸಿದ್ದಗೊಳ್ಳಬೇಕಿರುವ ಸಿನಿಮಾ. ಈ ಚಿತ್ರವನ್ನು ತೆಲುಗಿನ 'ಬಾಹುಬಲಿ' ಗೆ ಸರಿ ಸಮವಾಗಿ ಮಾಡಬೇಕಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ಮಾಡುತ್ತೀನಿ. ಈ ಚಿತ್ರಕ್ಕೂ ಪ್ರೇಮ್ ಅವರೇ ನಿರ್ದೇಶನ ಮಾಡಲಿದ್ದಾರೆ  ಎಂದು ಇತ್ತೀಚಿಗಷ್ಟೆ 'ದಿ ವಿಲನ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ 'ಕಲಿ' ಚಿತ್ರದ ಬಗ್ಗೆ ನಿರ್ಮಾಪಕ ಆರ್. ಮನೋಹರ್ ಅಭಿಪ್ರಾಯ ಪಟ್ಟರು.

short by Nithin / more at Balkani News

Comments