Skip to main content


ಗೊಂಬೆ ಹಾಡಿನಲ್ಲಿ ಚಂದನ್‌ ಶೆಟ್ಟಿ

ನಿವೇದಿತಾ ಗೌಡ ಮೇಲೆ ಚಂದನ್‌ ಶೆಟ್ಟಿ ಬರೆದು ಹಾಡಿದ 'ಗೊಂಬೆ ಹಾಡು' ಈಗ ಆಲ್ಬಂ ರೂಪದಲ್ಲಿ ಬರಲಿದೆ. ಬಿಗ್‌ಬಾಸ್‌ ಮನೆಯಲ್ಲಿ ಫೇಮಸ್‌ ಆಗಿದ್ದ ಈ ಹಾಡಿನಲ್ಲಿ ನಿವೇದಿತಾ ಮತ್ತು ಚಂದನ್‌ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೂ ರಾಜಾ ಮತ್ತು ರಾಣಿ ಗೆಟಪ್‌ನಲ್ಲಿ ಎನ್ನುವುದು ವಿಶೇಷ. ಈ ಹಾಡಿನ ಶೂಟಿಂಗ್‌ಗಾಗಿ ಬೆಂಗಳೂರಿನ ಅರಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಚಂದನ್‌. ಅತೀ ಶೀಘ್ರದಲ್ಲೇ ಈ ಹಾಡಿನ ಚಿತ್ರೀಕರಣ ಕೂಡ ನಡೆಯಲಿದೆ. ಈ ಜೋಡಿಯು ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಈ ಮೂಲಕ ಅದು ಈಡೇರುತ್ತಿದೆ.     

short by Pawan / more at Vijayakarnataka

Comments