Skip to main content


ದರ್ಶನ್‍ ಒಡೆಯನಿಂದ ಬಂತು ಹೊಸ ಸುದ್ದಿ


'ಒಡೆಯ' ಚಿತ್ರವು ತಮಿಳಿನ 'ವೀರಂ'ನ ರಿಮೇಕ್ ಆಗಿದ್ದು, ಚಿತ್ರವು ಸಹೋದರರ ಕಥೆಯನ್ನು ಹೇಳುತ್ತದೆ. ದರ್ಶನ್ ನಾಯಕನಾಗಿ ಕಾಣಿಸಿಕೊಂಡರೆ, ಅವರಿಗೆ ಈ ಚಿತ್ರದಲ್ಲಿ ನಾಲ್ವರು ತಮ್ಮಂದಿರು ಇರಲಿದ್ದು, ಈಗ ಆ ಪಾತ್ರಗಳಿಗೆ ಕಲಾವಿದರ ಆಯ್ಕೆ ಅಂತಿಮವಾಗಿದೆ. ದರ್ಶನ್ ತಮ್ಮಂದಿರಾಗಿ ಯಶಸ್, ಪಂಕಜ್, ನಿರಂಜನ್ ಹಾಗೂ ಸಮರ್ಥ್ ಅಭಿನಯಿಸುತ್ತಿದ್ದಾರೆ. ಈ ಪೈಕಿ ಯಶಸ್ ಈಗಾಗಲೇ ದರ್ಶನ್ ಅಭಿನಯದ 'ಚಕ್ರವರ್ತಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  ಇನ್ನು ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಮಗ ಪಂಕಜ್, ಇದೇ ಮೊದಲ ಬಾರಿಗೆ ದರ್ಶನ್ ಜೊತೆಗೆ ನಟಿಸುತ್ತಿದ್ದಾರೆ. ಉಳಿದಂತೆ ನಿರಂಜನ್ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ತಮ್ಮನ ಮಗ ಸಮರ್ಥ್ ಕೂಡಾ ದರ್ಶನ್ ತಮ್ಮನಾಗಿ ನಟಿಸುತ್ತಿದ್ದಾರೆ.     

short by Pawan / more at Eenadu India

Comments