Skip to main content


ಗೋಮಾಂಸ ತಿಂದಿದ್ದರಿಂದ ಪ್ರವಾಹ

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ತಮ್ಮ ಜೀವನನ್ನು ಸಹಜ ಸ್ಥಿತಿಗೆ ತಂದುಕೊಳ್ಳಲು ಕೇರಳದ ಜನ ಹೆಣಗಾಡುತ್ತಿದ್ದರೆ ಇಲ್ಲೊಬ್ಬ ಸ್ವಯಂ ಘೋಷಿತ ದೇವ ಮಾನವ 'ದನದ ಮಾಂಸ ತಿನ್ನವವರಿಗೆ ಸಹಾಯ ಮಾಡಬೇಡಿ' ಎಂದು ಹೇಳುವ ಮೂಲಕ ಉರಿಯುವ ಗಾಯದ ಮೇಲೆ ಉಪ್ಪು ಸುರಿಯವ ಕೆಲಸ ಮಾಡಿದ್ದಾನೆ. ಚಕ್ರಪಾಣಿ ಮಹಾರಾಜ್ ಎಂಬ ಈ ದೇವ ಮಾನವ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾನೆ. ಕೇರಳಕ್ಕೆ ಸಹಾಯ ಮಾಡುವಂತೆ ನಾನೂ ಮನವಿ ಮಾಡುತ್ತೇನೆ. ಆದರೆ ಪ್ರಕೃತಿ ಮತ್ತು ಪ್ರಾಣಿಗಳಿಗೆ ಗೌರವ ಸಲ್ಲಿಸುವವರಿಗೆ ಮಾತ್ರ ಸಹಾಯ ಹಸ್ತ ಚಾಚಬೇಕು. ರೊಟ್ಟಿ ಲಭ್ಯವಿರುವಾಗ ಕೇರಳದ ಜನತೆ ಗೋವುಗಳನ್ನು ಕತ್ತರಿಸಿ ಮಾಂಸವನ್ನು ತಿನ್ನುತ್ತಾರೆ. ಆದ್ದರಿಂದ ಗೋಮಾಂಸ ಭಕ್ಷಿಸುವವರನ್ನು ದೂರ ಇಡುವಂತೆ ಈತ ಮನವಿ ಮಾಡಿದ್ದಾನೆ.  

short by Pawan!

Comments