Skip to main content


ಶೂಟಿಂಗ್ ಮುಗಿಸಿಕೊಂಡ ಯಜಮಾನ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂಚೂರೂ ಗ್ಯಾಪು ಕೊಡದಂತೆ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಎರಡ್ಮೂರು ತಿಂಗಳ ಕಾಲ ಸತತವಾಗಿ ಈ ಚಿತ್ರಕ್ಕಾಗಿ ಸಮಯ ಮೀಸಲಿಟ್ಟಿದ್ದ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇದೀಗ ಸಮಾಪ್ತಿಗೊಂಡಿದೆ. ಮೈಸೂರಿನಲ್ಲಿಯೇ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ಚಾಲೂ ಆಗಿತ್ತು. ಆ ನಂತರದಲ್ಲಿ ಮಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಚಿತ್ರೀಕರಣ ನಡೆದು ಇದೀಗ ಮೈಸೂರಿನಲ್ಲಿಯೇ ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದುಕೊಂಡಿದೆ. ಇದು ಇಡೀ ಚಿತ್ರದ ಆಂತರ್ಯದಂಥಾ ಹಾಡಂತೆ. ಅದನ್ನು ವಿಶೇಷವಾಗಿ ರೂಪಿಸಬೇಕೆಂಬ ಮಹದಾಸೆಯಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಅದಕ್ಕಾಗಿ ಈಗಾಗಲೇ ಚಿತ್ರತಂಡ ತಯಾರಿ ಆರಂಭಿಸಿದೆ. ಹಾಡು ಯಾವಾಗ ರೆಡಿಯಾದರೂ ಬಂದು ನಟಿಸೋ ಭರವಸೆಯನ್ನೂ ದರ್ಶನ್ ಕೊಟ್ಟಿದ್ದಾರಂತೆ.   

short by Pawan / more at Public Tv

Comments