Skip to main content


ದಿ ವಿಲನ್ನಲ್ಲಿ ವಿಲನ್ ಯಾರು? ಶಿವರಾಜ್ ಕುಮಾರ್ ಅಥವಾ ಸುದೀಪ್?

ಕನ್ನಡದ ಸ್ಟಾರ್ ದಿಗ್ಗಜರಿಬ್ಬರು ಬೆನ್ನಿಗೆ ಬೆನ್ನು ಕೊಟ್ಟ ವಿಲನ್ ಭಂಗಿಯ ಪೋಸ್ಟರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇವರ ನಟನೆಯ ಸಿನಿಮಾದ ಟೀಸರ್ ಸಾಮಾಜಿಕ ಜಾಲ ತಾಣದ ಟ್ರೆಂಡ್ ಆಗಿದೆ. ಬಿಡುಗಡೆಯಾದ ಕೆಲ ಹಾಡುಗಳು ಈಗಾಗಲೇ ಜನರ ನಾಲಿಗೆಯಲ್ಲಿವೆ. ಇಷ್ಟಾದರೂ 'ದಿ ವಿಲನ್' ಚಿತ್ರದಲ್ಲಿ ವಿಲನ್ ಯಾರು ಎಂಬುದು ಯಾರಿಗೂ ತಿಳಿದಿಲ್ಲ. ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ 'ದಿ ವಿಲನ್' ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಈಚೆಗೆ ನಡೆದ ಚಿತ್ರದ ಆಡಿಯೊ ಬಿಡುಗಡೆಯಲ್ಲೂ ವಿಲನ್ ಯಾರು ಎಂಬ ಗುಟ್ಟು ರಟ್ಟಾಗಲಿಲ್ಲ. ನಿರೂಪಕಿ ಅನುಶ್ರೀ ನಡೆಸಿದ ಸಕಲ ಪ್ರಯತ್ನವೂ ವ್ಯರ್ಥ. ಕಟ್ಟಪ್ಪ, ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆ ಬಹುಕಾಲ ಕಾಡಿದ್ದಂತೆ ಇದೂ ಕಾಡಲಿದೆ.  

short by Pawan!

Comments