Skip to main content


ಹೊಸ ತಂತ್ರಜ್ಞಾನದಲ್ಲಿ ಮೂಡಿ ಬರುತ್ತಿರುವ ಗಂಧದಗುಡಿ

ಹಳೆಯ ಚಿತ್ರಗಳೆಲ್ಲವೂ ಇದೀಗ ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿವೆ. ಈಗಾಗಲೇ 'ನಾಗರಹಾವು', 'ಬಬ್ರುವಾಹನ','ದಾರಿ ತಪ್ಪಿದ ಮಗ','ಸತ್ಯ ಹರಿಶ್ಚಂದ್ರ' ಚಿತ್ರಗಳು ಮರು ಬಿಡುಗಡೆಗೊಂಡು ಯಶಸ್ವಿಯಾಗಿವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿರುವ ಚಿತ್ರಗಳಲ್ಲಿ 'ಗಂಧದ ಗುಡಿ' ಚಿತ್ರವೂ ಒಂದು. ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದರು. ಈಗ ಈ ಚಿತ್ರವು ಅತ್ಯಾಧುನಿಕ ಡಿಜಿಟಲ್ ಡಿಟಿಎಸ್ ಸೌಂಡ್ ಹಾಗೂ ಡಿಜಿಟಲ್ ಕಲರ್ ಗ್ರೇಡಿಂಗ್ ತಂತ್ರಜ್ಞಾನವೊಂದಿಗೆ ಅದ್ದೂರಿಯಾಗಿ ತೆರೆಗೆ ಬರಲಿದೆ.  

short by Pawan / more at Balkani News

Comments