Skip to main content


ಮಂಜಿನ ನಗರಿ ಗೂ ಚಾಲೆಂಜಿಂಗ್ ಸ್ಟಾರ್ ಗೂ ಇದೆ ಸಂಬಂಧ.!

ಮಳೆಯ ಆರ್ಭಟಕ್ಕೆ ಕೊಡಗು ಕಣ್ಮರೆಯಾಗೋ ಹಾಗಾಗಿದೆ. ಇಂತಹ ಕೊಡಗಿಗೆ ಕನ್ನಡದ ಬಿಗ್ ಸ್ಟಾರ್ಸ್ ಕೂಡ ನೆರವಾಗಿದ್ದಾರೆ. ಇಂತಹ ವಿಷಯಗಳಲ್ಲಿ ಒಂದು ಹೆಜ್ಜೆ ಮುಂದಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಂಜಿನ ನಗರಿ ಮಳೆಯಿಂದ ನೊಂದವರಿಗೆ ಅಭಯ ಹಸ್ತ ನೀಡಿದ್ದಾರೆ. ದರ್ಶನ್ ಗೂ ಕೊಡಗಿಗೂ ಅವಿನಭಾವ ಸಂಬಂಧ ಇದೆ. ತಮ್ಮ ಜಿಲ್ಲೆಯ ಪಕ್ಕದಲ್ಲೇ ಇರೋ ಊರು ಕೊಡಗು. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ಸಾಕಷ್ಟು ಸಿನಿಮಾಗಳನ್ನ ಕೊಡಗಿನಲ್ಲಿ ಶೂಟಿಂಗ್ ಮಾಡಿದ್ದಾರೆ. ಆಗಾಗ ಕೊಡಗಿಗೆ ಭೇಟಿ ನೀಡೋ ದಚ್ಚು, ತಮ್ಮ ಅಭಿಮಾನಿ ಬಳಗಗಳಿಗೆ ಕೊಡಗು ರಕ್ಷಿಸಿ ಎಂದು ಕರೆ ನೀಡಿದ್ದಾರೆ. ಅಷ್ಟೆ ಅಲ್ಲ ಸ್ವತಃ ದರ್ಶನ್ ರವರೇ ನಿರಾಶ್ರಿತರಿಗೆ ಬೇಕಾದ ಸಾಮಗ್ರಿಗಳನ್ನ ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ.  

short by Pawan!

Comments