Skip to main content


ಗಿರಿಜಾ ಮೀಸೆ ಬಿಡುತ್ತಿರುವ ಸುದೀಪ್

ಸುದೀಪ್ ಅವರು 'ಫೈಲ್ವಾನ್' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಪಕ್ಕಾ 'ಪೈಲ್ವಾನ್' ನಂತೆಯೇ ಕಾಣಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಮೈ ಹುರಿಗೊಳಿಸೋದಷ್ಟೇ ಅಲ್ಲದೇ, ಹುರಿಮೀಸೆ ಬಿಟ್ಟಿದ್ದಾರೆ. ಆದರೆ ಈ ಹೊಸ ಅವತಾರವು, 'ಪೈಲ್ವಾನ್' ಚಿತ್ರಕ್ಕಾಗಿಯೋ ಅಥವಾ ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕಾಗಿಯೋ ಎಂಬುದು ಮಾತ್ರ ತಿಳಿದು ಬಂದಿಲ್ಲ. ನಟ ಸುದೀಪ್ ರವರು ಹೀಗೆ ಚಿತ್ರದಿಂದ ಚಿತ್ರಕ್ಕೆ ಭಿನ್ನ ಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ವಿಶೇಷ ಗೆಟಪ್ ನೊಂದಿಗೆ ಮಿಂಚಲು ತಯಾರಿ ನಡೆಸಿದ್ದಾರೆ.   

short by Pawan / more at Balkani News

Comments