Skip to main content


ಒಡೆಯ ಹೆಸರನ್ನು ಕೆಲವರು ಒಡೆಯರ್ ಎಂದು ಅಪಪ್ರಚಾರ ಮಾಡಿದ್ರು : ದರ್ಶನ್

ದರ್ಶನ ಅಭಿನಯಿಸುತ್ತಿರುವ ಒಡೆಯ ಚಿತ್ರದ ಟೈಟಲ್ ನಿಂದ ವಿವಾದ ಉಂಟಾಗಿದ್ದು ನಿಮಗೆ ಗೊತ್ತೇ ಇದೆ. ಈ ಬಗ್ಗೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಸಿನಿಮಾಗೆ 'ಒಡೆಯ' ಎಂದು ಟೈಟಲ್ ರಿಜಿಸ್ಟರ್ ಮಾಡಲಾಗಿತ್ತು. ಆದರೆ ಕೆಲವರು ಬೇಕಂತಲೇ 'ಒಡೆಯರ್' ಎಂದು ಅಪಪ್ರಚಾರ ಮಾಡಿ ವಿವಾದ ಉಂಟಾಗುವಂತೆ ಮಾಡಿದರು ಎಂದು ಹೇಳಿದ್ದಾರೆ. ಮೈಸೂರಿನಲ್ಲಿ‌ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಚಿತ್ರದ ಹೆಸರನ್ನು 'ಒಡೆಯ' ಎಂದೇ ನೋಂದಣಿ ಮಾಡಿಸಲಾಗಿತ್ತು. ನಂತರ ಒಡೆಯರ್ ಎಂದು ಅಪಪ್ರಚಾರವಾಗಿ 'ಒಡೆಯರ್' ಟೈಟಲ್ ಬಗ್ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್​ ನಮಗೆ ಯಾವುದೇ ಆಕ್ಷೇಪವಿಲ್ಲ. ನೀವು ಆ ಹೆಸರನ್ನು ಸಿನಿಮಾ ಹೆಸರಾಗಿ ಬಳಸಿಕೊಳ್ಳಬಹುದು ಎಂದು ಹೇಳಿದ್ದರು ಎಂದು ದರ್ಶನ್ ಸ್ಪಷ್ಟನೆ ನೀಡಿದರು.   

short by Pawan / more at Kannada News Now

Comments