Skip to main content


ಸಹ ನಟನ ಮೇಲೆ ದರ್ಶನ್ ಹಲ್ಲೆ ಮಾಡಿದ್ದು ನಿಜಾನಾ.? ಬಿ ಸುರೇಶ್ ಏನಂದ್ರು.?

''ಯಜಮಾನ' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಸುಮಾರು 400 ಕ್ಕೂ ಅಧಿಕ ಜನರು ಕೆಲಸ ಮಾಡ್ತಿದ್ದಾರೆ. ಈ ವೇಳೆ ಅಲ್ಲೊಬ್ಬರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಅವರನ್ನ ಕಂಡ ದರ್ಶನ್ ಅವರಿಗೆ ಬುದ್ದಿವಾದ ಹೇಳಿದ್ದಾರೆ ಅಷ್ಟೇ''. 'ನಿರ್ಮಾಪಕರು ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡ್ತಾರೆ, ನೀವು ಈಗ ವಿಡಿಯೋ ಮಾಡಿ, ಫೇಸ್ ಬುಕ್ ನಲ್ಲಿ ಹಾಕಿಬಿಟ್ರೆ, ಥಿಯೇಟರ್ ಗೆ ಯಾರ ಬರಬೇಕು. ಹೀಗೆ ಮಾಡಬಾರದು. ಇದು ತಪ್ಪು ಎಂದು ಅವರಿಗೆ ಬರಿ ಮಾತಿನಲ್ಲಿ ಬುದ್ದಿವಾದ ಹೇಳಿದ್ದಾರೆ. ಅದು ಎರಡು ಬಾರಿ ವಿಡಿಯೋ ಮಾಡಿದ್ದನ್ನ ಕಂಡು ನಂತರ ದರ್ಶನ್ ಹೇಳಿದ್ದು''. ''ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವುದು ಸುಳ್ಳು. ನಾವು ಶೂಟಿಂಗ್ ಸೆಟ್ ನಲ್ಲೇ ಇದ್ದೀವಿ. ಈಗಲೂ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಯಾವುದೇ ತೊಂದರೆಯಾಗಿಲ್ಲ. ಯಾರಿಗೂ ದೈಹಿಕ ಹಲ್ಲೆ ಆಗಿದ್ದನ್ನ ನಾನು ಕಂಡಿಲ್ಲ'' ಎಂದು ನಿರ್ಮಾಪಕ ಬಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.   

short by Pawan / more at Filmibeat

Comments