Skip to main content


ಹೊಸ ಲುಕ್​ನಲ್ಲಿ ಯಶ್!

‘ಕೆಜಿಎಫ್’ ಸಿನಿಮಾ ಸಲುವಾಗಿ ಕಳೆದ ಎರಡು ವರ್ಷಗಳಿಂದ ಯಶ್ ಗಡ್ಡಧಾರಿಯಾಗಿದ್ದರು. ಇಡೀ ಸಿನಿಮಾದ ಚಿತ್ರೀಕರಣವೂ ಅದೇ ಅವತಾರದಲ್ಲೇ ಆಗಿತ್ತು. ಇದೀಗ ಅವರ ಗಡ್ಡಕ್ಕೆ ಗುಡ್​ಬೈ ಹೇಳುವ ಕಾಲ ಸನ್ನಿಹಿತವಾಗಿದೆ. ಅಂದರೆ, ‘ಕೆಜಿಎಫ್’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಮುಂದಿನ ಚಿತ್ರಕ್ಕಾಗಿ ಹೊಸ ಅವತಾರವೆತ್ತಲು ಯಶ್ ಅಣಿಯಾಗುತ್ತಿದ್ದಾರೆ. ಯಶ್ ಹೋದಲ್ಲಿ ಬಂದಲ್ಲಿ, ಗಡ್ಡಕ್ಕೆ ಮುಕ್ತಿ ಯಾವಾಗ ಎಂಬ ಪ್ರಶ್ನೆಗಳನ್ನೇ ಹೆಚ್ಚೆಚ್ಚು ಎದುರಿಸುತ್ತಿದ್ದರು. ಇದೀಗ ಅವರೇ ನೇರವಾಗಿ ಗಡ್ಡಕ್ಕೆ ಕತ್ತರಿ ಹಾಕುವ ಬಗ್ಗೆ ಹೇಳಿಕೊಂಡಿದ್ದಾರೆ. ಸೋಮವಾರ ಅಥವಾ ಮಂಗಳವಾರ ಹೊಸದೊಂದು ಲುಕ್​ನಲ್ಲಿ ಅಭಿಮಾನಿಗಳ ಮುಂದೆ ಎದುರಾಗಲಿದ್ದಾರಂತೆ. 2016ರಲ್ಲಿ ಬಿಡುಗಡೆಗೊಂಡ ‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರದ ಬಳಿಕ ‘ಕೆಜಿಎಫ್’ಗಾಗಿಯೇ ಗಡ್ಡಬಿಟ್ಟು ಲುಕ್ ಬದಲಾಯಿಸಿಕೊಂಡ ಯಶ್, ಸುದೀರ್ಘ ಎರಡು ವರ್ಷಗಳ ಕಾಲ ಹಾಗೇ ಇದ್ದರು. ಇದೀಗ ‘ಕಿರಾತಕ 2’ ಚಿತ್ರದ ಸಲುವಾಗಿ ಮತ್ತೊಂದು ಭಿನ್ನ ಗೆಟಪ್​ನಲ್ಲಿ ಕಾಣಿಸಲಿದ್ದಾರೆ.   

short by Pawan!

Comments