Skip to main content


ಡಾಲಿ - ಚಿಟ್ಟೆ ಯ ಸ್ನೇಹ ಸಂಬಂಧ..

ಧನಂಜಯ್ ಉರುಫ್ ಡಾಲಿ, ವಸಿಷ್ಠ ಸಿಂಹ ಉರುಫ್ ಚಿಟ್ಟೆಇಬ್ಬರನ್ನ ಒಮ್ಮೆ ನೆನೆಸಿಕೊಂಡರೆ ಸಾಕು ಕಣ್ಮುಂದೆ ಬರೋದು ಯಾವ ಸಿನಿಮಾನೂ ಅಲ್ಲ 'ಟಗರು' ಸಿನಿಮಾ. ಈ‌ ಇಬ್ಬರಿಗೂ ಒಳ್ಳೆ ಬ್ರೇಕ್ ನೀಡಿದ ಈ ಸಿನಿಮಾ ನಂತರ ಆಫರ್ ಗಳ ಸುರಿಮಳೆಯನ್ನೇ ಹರಿಸಿತ್ತು. ಈಗಾಗ್ಲೆ ಸಾಕಷ್ಟು ಸಿನಿಮಾಗಳ ಆಫರ್ ಕೈಯಲ್ಲಿ ಹಿಡಿದಿದ್ದಾರೆ ಡಾಲಿ. ಇನ್ನು ವಸಿಷ್ಠ ಕೂಡ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಇಬ್ಬರು ಸದ್ಯ ಸಿನಿಮಾದಲ್ಲಿದ್ದರು ಒಳ್ಳೆ ಫ್ರೆಂಡಾಗಿದ್ದಾರೆ. ಡಾಲಿ-ಚಿಟ್ಟೆ ಅಂತಾನೇ ಫೇಮಸ್ ಆಗಿರೋ ಇವರ ಸ್ನೇಹ ಇಂದಿಗೂ ಜೀವಂತ. ಸಿನಿಮಾದ ಮೂಲಕ ಸ್ನೇಹಿತರಾದ ಇವರು ಜೀವದ ಗೆಳೆಯರು. ಈಗಾಗ್ಲೆ ಟಗರು ಸಿನಿಮಾದ ಮೂಲಕ ಒಂದಾಗಿರೋ ಈ ಜೋಡಿ ನಿಜ ಜೀವನದಲ್ಲಿ ಸ್ನೇಹ ಜೋಡಿಗಳೇ. ಇಬ್ಬರೂ ಹಾಸನದ ಪ್ರತಿಭೆಗಳೇ. ಮೈಸೂರಿನಲ್ಲಿ ರಂಗಭೂಮಿ, ಓದೋದ್ರಲ್ಲಿ ಬ್ಯುಸಿಯಾಗಿದ್ದರು.. ಐಟಿ ಕ್ಷೇತ್ರಗಳಲ್ಲೂ ಕೂಡ ಸಾಕಷ್ಟು ಕೆಲಸ ಮಾಡಿದ್ದ ಇವರು ಮುಂದೆ ಒಂದಾಗಿದ್ದು, ಸಿನಿಮಾದಲ್ಲಿ. ವಸಿಷ್ಠ ಮತ್ತು ಧನಂಜಯ್​ ಫ್ರೆಂಡ್​ಶಿಪ್ ಆರಂಭವಾದದ್ದು ಬೆಂಗಳೂರಿನಲ್ಲಿ. ಧನಂಜಯ್​ ಡೈರೆಕ್ಟರ್​ ಸ್ಪೆಷಲ್​ ಸಿನಿಮಾ ಮಾಡುವಾಗ ವಸಿಷ್ಠ ಆಗಷ್ಟೇ ನಟನೆಯತ್ತ ಹೋಗಿದ್ದರು.  

short by Pawan / more at Balkani News


Comments