Skip to main content


ಕೆಜಿಎಫ್ ಶೂಟಿಂಗ್ ಮುಕ್ತಾಯ!

ಎರಡು ವರ್ಷಗಳಿಂದ ಕೆಜಿಎಫ್ ಶೂಟಿಂಗ್ ಭಾರದಿಂದ ಸಾಗಿತ್ತು.. ಅಭಿಮಾನಿಗಳೆಲ್ಲ ಕೆಜಿಎಫ್ ಶೂಟಿಂಗ್ ಯಾವಾಗ ಮುಗಿಯುತ್ತದೆ, ರಿಲೀಸ್ ಯಾವಾಗ ಆಗಲಿದೆ ಎಂದು ಕಾಯುತ್ತಿದ್ದರು.. ಇತ್ತೀಚೆಗಷ್ಟೇ ಚಿತ್ರದ ಕೊನೆಯ ಹಾಡು ಕೂಡ ಮುಗಿದ್ದಿದೆ. ಈ ಹಾಡಿನ ಮೂಲಕ ಕೆಜಿಎಫ್ ಚಿತ್ರೀಕರಣ ಮುಕ್ತಾಯವಾಗಿದೆ. ಟಾಲಿವುಡ್ ನಟಿ ತಮನ್ನಾ 'ಜೋಕೆ ನಾನು ಬಳ್ಳಿಯ ಮಿಂಚು' ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಈ ಹಾಡು ಕಳೆದ ವಾರವಷ್ಟೇ ಚಿತ್ರೀಕರಣ ಮಾಡಲಾಯಿತು. ಈ ಹಾಡಿನೊಂದಿಗೆ ಚಿತ್ರ ಸಂಪೂರ್ಣವಾಗಿ ಮುಗಿದಿದೆ. ಇಂದು ಕೊನೆಯ ದಿನವಾಗಿದ್ದು ಚಿತ್ರತಂಡ ಕೇಕ್ ಕತ್ತರಿಸುವ ಮೂಲಕ ಚಿತ್ರೀಕರಣಕ್ಕೆ ಗುಡ್ ಬೈ ಹೇಳಿದೆ.

short by Pawan!