Skip to main content


ಬಾಂಗ್ಲಾದೇಶದಲ್ಲೂ ರಾಕಿಂಗ್ ಸ್ಟಾರ್ ಯಶ್ ಗಿದ್ದಾರೆ ಅಭಿಮಾನಿ ದೇವರು.!

ದಶಕದ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್ ಇಂದು ಬಹು ಬೇಡಿಕೆಯ ನಟ. ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟ ಯಶ್ ಕಾಲ್ ಶೀಟ್ ಗಾಗಿ ಇವತ್ತು ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. 'ಮೊಗ್ಗಿನ ಮನಸ್ಸು', 'ಲಕ್ಕಿ', 'ಗೂಗ್ಲಿ', 'ರಾಜಾ ಹುಲಿ', 'ಗಜಕೇಸರಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಮಾಸ್ಟರ್ ಪೀಸ್'... ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟ ಯಶ್ ಗೆ ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ಭಾರತದಾದ್ಯಂತ... ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ ವಿಡಿಯೋನ ನಿನ್ನೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಯಶ್ ಮೇಲೆ ಅಭಿಮಾನ ವ್ಯಕ್ತ ಪಡಿಸಿ ಬಾಂಗ್ಲಾದೇಶದ ಓರ್ವ ಯುವಕ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. ''ನಾನು ಬಾಂಗ್ಲಾದೇಶದವನು. ನಾನು ಯಶ್ ರವರ ಬಹು ದೊಡ್ಡ ಅಭಿಮಾನಿ. ಲವ್ ಯು ಮೈ ಬಾಸ್ ರಾಕಿಂಗ್ ಸ್ಟಾರ್ ಯಶ್'' ಎಂದು ಆ ಯುವಕ ಬರೆದುಕೊಂಡಿದ್ದಾರೆ.    

short by Pawan / more at Filmibeat

Comments