Skip to main content


ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರಳತೆಗೆ ಇದಕ್ಕಿಂತ ಸಾಕ್ಷಿ ಬೇಕಾ.?

ಕಳೆದ ಶುಕ್ರವಾರ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ ದರ್ಶನ್ ರನ್ನು ಭೇಟಿ ಆಗಲು ವಿಕಲಚೇತನ ಅಭಿಮಾನಿಯೊಬ್ಬರು ಬಂದಿದ್ದರು. ಆ ಅಭಿಮಾನಿಯನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿ, ಔತಣ ಕೊಟ್ಟು, ಸೆಲ್ಫಿ ಕ್ಲಿಕ್ಕಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ ನಟ ದರ್ಶನ್. ಈ ವಿಚಾರವನ್ನ ಸ್ವತಃ ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಮತ್ತೋಮ್ಮೆ ಮಾನವೀಯತೆ ಮೆರೆದ ಸರಳತೆಯ ಸಾಮ್ರಾಟ್ ಚಾಲೆಂಜಿಂಗ್ ಸ್ಟಾರ್ ಇಂದು ಚಾಮುಂಡೇಶ್ವರಿ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿರುವ ತಮ್ಮ ಫಾರಂಹೌಸ್ ನಲ್ಲಿ ಪೂಜಾಮಹೋತ್ಸವ ಏರ್ಪಡಿಸಲಾಗಿತ್ತು ಪೂಜಾಮಹೋತ್ಸವಕ್ಕೆ ಅಕಸ್ಮಾತ್ ಅಲ್ಲಿಗೆ ಬಂದ ಅಂಗವಿಕಲ ಅಭಿಮಾನಿಗೆ ಔತಣ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಸ್ ಆಫ಼್ ಸ್ಯಾಂಡಲ್ವುಡ್ ಡಿ ಬಾಸ್ ದರ್ಶನ್ ಗೆ ಇರುವ ಮಾನವೀಯತೆ ಹಾಗೂ ಸರಳತೆಯನ್ನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ.  

short by Pawan / more at Filmibeat

Comments