Skip to main content


ರವಿಚಂದ್ರ ಸಿನಿಮಾದಿಂದ ಬಂದ ಅಚ್ಚರಿಯ ಸುದ್ದಿ

ನಟ ಉಪೇಂದ್ರ ಹಾಗೂ ರವಿಚಂದ್ರನ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಅವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ 'ರವಿಚಂದ್ರ' ಸಿನಿಮಾದ ಮುಹೂರ್ತ ನಿನ್ನೆ ನಡೆದಿದೆ. ಅದರ ಹಿಂದೆಯೇ ಈಗ ಈ ಚಿತ್ರತಂಡದಿಂದ ಒಂದು ಅಚ್ಚರಿಯ ವಿಷಯ ಹೊರ ಬಂದಿದೆ.  ಸಿನಿಮಾದಲ್ಲಿ ಉಪೇಂದ್ರ ಹಾಗೂ ರವಿಚಂದ್ರನ್ ಯಾವ ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.  ಚಿತ್ರದಲ್ಲಿ ಈ ಇಬ್ಬರು ನಟರು ಸಹೋದರರಾಗಿ ಕಾಣಿಸಿಕೊಳ್ಳಲಿದ್ದಾರೆ. ಉಪೇಂದ್ರ ತಮ್ಮ ಪಾತ್ರದಲ್ಲಿ ಮತ್ತು ರವಿಚಂದ್ರನ್ ಅಣ್ಣನಾಗಿ ಚಿತ್ರದಲ್ಲಿ ನಟಿಸಲಿದ್ದಾರೆ.  'ರವಿಚಂದ್ರ' ತೆಲುಗಿನ 'ಬಲುಪು' ಸಿನಿಮಾದ ರಿಮೇಕ್ ಆಗಿದೆ.  ಆ ಚಿತ್ರದಲ್ಲಿ ಇದ್ದ ಅಪ್ಪ ಮಗನ ಪಾತ್ರವನ್ನು ಇಲ್ಲಿ ಅಣ್ಣ ತಮ್ಮನ ಪಾತ್ರವಾಗಿ ಬದಲಾಯಿಸಿಕೊಂಡಿರುವ ಆಗಿದೆ. ಇನ್ನು ಈ ಚಿತ್ರದ ಫೋಟೋ ಶೂಟ್ ಆಗಿದ್ದು, ಇಬ್ಬರ ಲುಕ್ ರಿವೀಲ್ ಆಗಿದೆ.  ಓಂ ಪ್ರಕಾಶ್ ರಾವ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಾನ್ವಿ ಶ್ರೀವಾತ್ಸವ ಹಾಗೂ ನಿಮಿಕಾ ರತ್ನಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

short by Nithin

Comments