Skip to main content


ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರು ವಿವಾದ: ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಸೇರಿದ ಆಡಿ ಕಾರನ್ನು ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ ಎಂದು ಟೆಕ್ಕಿ ಧನಂಜಯ್ ಎಂಬುವವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮಾಧ್ಯಮಗಳಲ್ಲಿ ಸುದ್ದಿಯಾಗಿರುವ ಬಗ್ಗೆ  ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಕಾರನ್ನು ನನ್ನ ಸ್ನೇಹಿತ ನಿರ್ದೇಶಕ ರಿಷಬ್ ಶೆಟ್ಟಿಗೆ ನೀಡಿದ್ದೇನೆ. ಅವರ ಹೆಸರಿಗೆ ದಾಖಲೆಯನ್ನು ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಜೆ ಪಿ ನಗರದಲ್ಲಿ ರಿಷಬ್ ಶೆಟ್ಟಿಯವರನ್ನು ಸ್ಟುಡಿಯೊಗೆ ಬಿಟ್ಟು ಅಲ್ಲಿ ಸುತ್ತಮುತ್ತ ಬೇರೆ ಸ್ಥಳ ಸಿಗದೆ ಅಲ್ಲಿ ಚಾಲಕ ನಿಲುಗಡೆ ಮಾಡಿರಬೇಕು. ನಮ್ಮ ಗಮನಕ್ಕೆ ಈ ವಿಷಯ ಬಂದಿರಲಿಲ್ಲ. ನಮ್ಮ ಚಾಲಕರೂ ಹೇಳಿರಲಿಲ್ಲ ಎನ್ನುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಹಾಕುವ ಮುನ್ನ ನಮ್ಮ ಗಮನಕ್ಕೆ ತರಬಹುದಾಗಿತ್ತು. ನಾವು ತಕ್ಷಣವೇ ಕಾರನ್ನು ತೆಗೆಯುತ್ತಿದ್ದೆವು. ಅವರು ಮಾಧ್ಯಮ ಮೂಲಕ ಗಮನಸೆಳೆಯಲು ಯತ್ನಿಸಿದ್ದಾರೆ ಎನಿಸುತ್ತದೆ, ಹೀಗಾಗಿ ನನ್ನ ಹೆಸರನ್ನು ಕೂಡ ಟ್ಯಾಗ್ ಮಾಡಿದ್ದಾರೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.  

short by Pawan / more at Kannada Prabha

Comments