Skip to main content


ಈ ಬಾರಿ ತೋತಾಪುರಿ : ಮತ್ತೆ ಒಂದಾದ ನೀರ್ ದೋಸೆ ಜೋಡಿ

ಪ್ರೇಕ್ಷಕರಿಗೆ 'ನೀರ್ ದೋಸೆ' ತಿನ್ನಿಸಿದ್ದ ವಿಜಯ ಪ್ರಸಾದ್ ಈಗ 'ತೋತಾಪುರಿ' ರುಚಿ ತೋರಿಸಲು ಬಂದಿದ್ದಾರೆ. ಜಗ್ಗೇಶ್ ಹೊಸ ಸಿನಿಮಾಗೆ 'ತೋತಾಪುರಿ' ಎಂಬ ಹೆಸರು ಫಿಕ್ಸ್ ಆಗಿದೆ. ಜೊತೆಗೆ ಟ್ಯಾಗ್ ಲೈನ್ 'ತೊಟ್ ಕೀಳ್ ಬೇಕಷ್ಟೇ' ಎಂದಿದೆ. ಸಿನಿಮಾದ ಮುಹೂರ್ತ ಇಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ.ನಟ ಜಗ್ಗೇಶ್ ಈ ಸಿನಿಮಾದಲ್ಲಿ ಕೃಷಿಕನ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಅವರ ಪಾತ್ರದ ಲುಕ್ ರಿವೀಲ್ ಆಗಿದ್ದು, ಕೆಲ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ''ಇದು ಬಹಳ ಅದ್ಬುತ ಕಥೆ.ನೀರ್ ದೋಸೆ ಗಿಂತ ಎರಡು ಹೆಜ್ಜೆ ಮುಂದೆ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.  

short by Pawan!

Comments